ಪ್ರಗತಿವಾಹಿನಿ ಸುದ್ದಿ; ಬಾಗಲಕೋಟೆ: ಜಿಲ್ಲೆ ಜಿಲ್ಲೆಗಳಲ್ಲೂ ಮಾಹಾಮಾರಿ ಕೊರೊನಾ ಅಟ್ಟಹಾಸ ನಡೆಸುತ್ತಿದ್ದು, ಗಡಿ ಜಿಲ್ಲೆ ಬೆಳಗಾವಿಯಲ್ಲಿ ಶಿಕ್ಷಕರೊಬ್ಬರ ಇಡೀ ಕುಟುಂಬವನ್ನೇ ಬಲಿ ಪಡೆದುಕೊಂಡಿದೆ. ಸಾಲಹಳ್ಳಿಯ ಒಂದೇ ಕುಟುಂಬದ ನಾಲ್ವರು ಕೊರೊನಾ ಸೋಂಕಿಗೆ ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಶಿಕ್ಷಕರ ಕುಟುಂಬವೊಂದು ವಾರದ ಅಂತರದಲ್ಲಿ ಸೋಂಕಿಗೆ ಬಲಿಯಾಗಿದೆ. ಹಾಸ್ಟೇಲ್ ಸೂಪರಿಂಟೆಂಡೆಂಟ್ ವೆಂಕಟೇಶ್ ಒಂಟಗೋಡಿ (45) ಅವರ ಪತ್ನಿ ಶಿಕ್ಷಕಿ ರಾಜೇಶ್ವರಿ (40), ರಾಜೇಶ್ವರಿ ತಂದೆ-ತಾಯಿಯರಾದ ರಾಮನಗೌಡ ಹಾಗೂ ಲಕ್ಷ್ಮೀಬಾಯಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮೂಲತ: ಬಾಗಲಕೋಟೆಯವರಾದ ವೆಂಕಟೇಶ್ ಹಾಗೂ ಕುಟುಂಬದವರು ಬೆಳಗಾವಿ ಜಿಲ್ಲೆಯ ಸಾಲಹಳ್ಳಿಯಲ್ಲಿ ವಾಸವಾಗಿದ್ದರು. ಮೊದಲು ಪತ್ನಿ ರಾಜೆಶ್ವರಿಗೆ ಕೊರೊನಾ ಸೋಂಕು ತಗುಲಿತ್ತು, ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಬೆನ್ನಲ್ಲೇ ಅವರ ತಂದೆ-ತಾಯಿಗೂ ಸೋಂಕು ದೃಢಪಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ರಾಜೇಶ್ವರಿ ಮೇ 3ರಂದು ಸಾವನ್ನಪ್ಪಿದ್ದರೆ, ಅವರ ತಂದೆ-ತಾಯಿ ಮೇ 5ರಂದು ಮೃತಪಟ್ಟಿದ್ದರು. ಇದೇ ವೇಳೆ ಮೇ 12ರಂದು ರಾಜೇಶ್ವರಿ ಪತಿ ವೆಂಕಟೇಶ್ ಕೂಡ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇಡೀ ಕುಟುಂಬವೇ ಇದೀಗ ಕೊರೊನಾ ಸೋಂಕಿಗೆ ಬಲಿಯಾಗಿದೆ.
ತೌಕ್ತೆ ಚಂಡಮಾರುತಕ್ಕೆ 6 ಜನ ಬಲಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ