Kannada NewsLatest

ಬೆಳಗಾವಿಯಲ್ಲಿ ಮತ್ತೊಂದು ದುರಂತ; ಅಜ್ಜಿ ರಕ್ಷಣೆಗೆಂದು ಹೋಗಿ ಮಮ್ಮಗನೂ ಸಾವು

ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ವಿದ್ಯುತ್ ತಂತಿ ಸ್ಪರ್ಶಿಸಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅಜ್ಜಿಯನ್ನು ರಕ್ಷಣೆ ಮಾಡಲೆಂದು ಹೋಗಿದ್ದ ಮೊಮ್ಮಗ ಕೂಡ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿಯ ಸಂಕೇಶ್ವರ ಪಟ್ಟಣದ ಮಡ್ಡಿಗಲ್ಲಿಯಲ್ಲಿ ಸಂಭವಿಸಿದೆ.

ಅಜ್ಜಿ ಶಾಂತವ್ವ ಬಸ್ತವಾಡೆ ಹಾಗೂ ಮೊಮ್ಮಗ 24 ವರ್ಷದ ಸಿದ್ಧಾರ್ಥ ಬಸ್ತವಾಡೆ ಮೃತರು. ನಿನ್ನೆ ರಾತ್ರಿ ಸುರಿದ ಧರಾಕಾರ ಮಳೆ ಗಾಳಿಗೆ ಮನೆ ಹಿತ್ತಲಲ್ಲಿ ಬಟ್ಟೆ ಒಣಗಿ ಹಾಕುವ ತಂತಿಗೆ ವಿದ್ಯುತ್ ತಂತಿ ತಗುಲಿದೆ. ಅಜ್ಜಿ ಇಂದು ಬಟ್ಟೆ ಒಣಗಿಸಲೆಂದು ತಂತಿ ಮೇಲೆ ಬಟ್ಟೆ ಹಾಕಿದ್ದಾರೆ. ಈ ವೇಳೆ ಕರೆಂಟ್ ಶಾಕ್ ತಗುಲಿದೆ.

Related Articles

ಅಜ್ಜಿಗೆ ಕರೆಂಟ್ ಹೊಡೆಯುತ್ತಿದ್ದುದು ಕಂಡ ಮೊಮ್ಮಗ ತಕ್ಷಣ ಅಜ್ಜಿ ರಕ್ಷಣೆಗೆ ಧಾವಿಸಿದ್ದಾನೆ. ಮೊಮ್ಮಗನಿಗೂ ಕರೆಂಟ್ ಶಾಕ್ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇನ್ನೋರ್ವ ಮಹಿಳೆ ಕೂಡ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಸಂಕೇಶ್ವರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿದ್ಯಾರ್ಥಿನಿಗೆ ಕಿರುಕುಳ; ಪ್ರೊಫೆಸರ್ ಬಂಧನ

Home add -Advt

Related Articles

Back to top button