Latest

ನಗ್ನ ವಿಡಿಯೋ ಮೂಲಕ ಬ್ಲ್ಯಾಕ್ ಮೇಲ್: ಬೆಳಗಾವಿಗರೇ ಹುಷಾರ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸೈಬರ್‌ ವಂಚಕರು ಫೇಸ್ ಬುಕ್ ನಲ್ಲಿ ಯುವತಿಯರ ಹೆಸರಲ್ಲಿ ಫ್ರೆಂಡ್ ರಿಕ್ವೆಷ್ಟಗಳನ್ನು ಸಾರ್ವಜನಿಕರಿಗೆ ಕಳುಹಿಸಿ ಬಳಿಕ ನಗ್ನ ವಿಡಿಯೋ ಕರೆಗಳನ್ನು ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಪ್ರಕರಣ ಕುಂದಾನಗರಿ ಬೆಳಗಾವಿಯಲ್ಲೂ ಬೆಳಕಿಗೆ ಬಂದಿದೆ.

ಫೇಸ್ ಬುಕ್ ನಲ್ಲಿ ಯುವತಿಯರ ರೂಪದಲ್ಲಿ ವಂಚಕರು ಫ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸಿ ಸಾರ್ವಜನಿಕರ ಸಂಪರ್ಕ ಸಾಧಿಸುತ್ತಾರೆ. ರಿಕ್ವೆಸ್ಟ್ ಸ್ವೀಕರಿಸಿದ ನಂತರ ಅವರೊಂದಿಗೆ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾಡಿ ಅವರ ವ್ಯಾಟ್ಸ್‌ಅಪ್ ನಂಬರ್ ಪಡೆದುಕೊಳ್ಳುತ್ತಾರೆ. ನಂತರ ಯುವತಿಯಿರಿಂದ ವಿಡಿಯೋ ಕರೆಗಳನ್ನು ಮಾಡಿಸಿ, ಅವರ ನಗ್ನ ದೇಹವನ್ನು ಪ್ರದರ್ಶಿಸಿ ಮುಂದಿನ ವ್ಯಕ್ತಿಯೂ ಸಹ ನಗ್ನವಾಗುವಂತೆ ಮನವೊಲಿಸುತ್ತಾರೆ. ವಿಡಿಯೋ ಕಾಲನ್ನು ರೆಕಾರ್ಡ ಮಾಡಿ ಆ ನಗ್ನ ವಿಡಿಯೋವನ್ನು ಎದುರುದಾರನಿಗೆ ಕಳುಹಿಸಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ತಮ್ಮ ಫೇಸ್‌ಬುಕ್ ಫ್ರೆಂಡ್ಸ್ ಎಲ್ಲರಿಗೂ ಕಳುಹಿಸುವುದಾಗಿ ಬೆದರಿಕೆಯೊಡ್ಡಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಾರೆ. ಇಂತಹ ಪ್ರಕರಣಗಳು ಬೆಳಗಾವಿಯಲ್ಲಿ ಹೆಚ್ಚುತ್ತಿದೆ.

ಆದ್ದರಿಂದ ಸಾರ್ವಜನಿಕರು ಇಂತಹ ಫೇಸ್‌ಬುಕ್ ಫ್ರೆಂಡ್ ರಿಕ್ವೆಸ್ಟ್‌ಗಳನ್ನು ಸ್ವೀಕರಿಸಬಾರದು, ಮೊಬೈಲ್ ನಂಬರ್‌ಗಳನ್ನು ವಂಚಕರಿಗೆ ನೀಡಬಾರದು, ಅಪರಿಚಿತ ವ್ಯಾಟ್ಸ್ ಅಪ್ ವಿಡಿಯೋ ಕಾಲ್ ಬಂದಲ್ಲಿ ಅದನ್ನು ಸ್ವೀಕರಿಸಬಾರದು ಎಂದು ಡಿಸಿಪಿ ವಿಕ್ರಂ ಅಮಟೆ ಮನವಿ ಮಾಡಿದ್ದಾರೆ.

ಒಂದು ವೇಳೆ ವಂಚನೆಗೆ ಒಳಗಾದರೆ ವಂಚಕರಿಗೆ ಹಣ ನೀಡದೇ ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಬೇಕು. ಇಂತಹ ಪ್ರಕರಣಗಳು ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದ್ದು ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ಕೋರಿದ್ದಾರೆ.

ಸಂಪುಟ ರಚನೆಗೆ ಸಂಜೆಯೇ ಮುಹೂರ್ತ ಫಿಕ್ಸ್; ಬ್ಯಾಲೆನ್ಸ್ ಸಂಪುಟಕ್ಕೆ ಒತ್ತು ಎಂದ ಸಿಎಂ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button