Latest

ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿದ ಡಿವಿಎಸ್,ರೇಣುಕಾಚಾರ್ಯ; ಸಿದ್ದರಾಮಯ್ಯ ಆರೋಪ

ಪ್ರಗತಿವಾಹಿನಿ ಸುದ್ದಿ; ಕಾರವಾರ: ಮಾಜಿ ಸಚಿವರಾದ ಡಿ.ವಿ.ಸದಾನಂದಗೌಡ ಹಾಗೂ ಶಾಸಕ ರೇಣುಕಾಚಾರ್ಯ ಸೆಕ್ಸ್ ಸ್ಕ್ಯಾಂಡಲ್ ನಲ್ಲಿ ಸಿಲುಕಿಕೊಂಡಿದ್ದಾರೆ. ಹಾಗಾಗಿಯೇ ಇಬ್ಬರೂ ನ್ಯಾಯಾಲಯದಿಂದ ಸ್ಟೇ ತಂದಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿರುವ ಸಿದ್ದರಾಮಯ್ಯ, ಕಾರವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ಭ್ರಷ್ಟ ಪಕ್ಷ, ಭ್ರಷ್ಟ ಸರ್ಕಾರವಾಗಿದೆ. ಯಾವ ಕಾರಣಕ್ಕೆ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸಿದರು? ಬಿಜೆಪಿಯವರು ತಾವು ಸಾಚಾಗಳೆಂದು ತೋರಿಸಿಕೊಳ್ತಾರೆ. ಆದರೆ ಸಂಸ್ಕೃತಿರಹಿತರು ಎಂದು ವಾಗ್ದಾಳಿ ನಡೆಸಿದರು.

Home add -Advt

ಅಕ್ಕಪಕ್ಕದ ರಾಜ್ಯಗಳಾದ ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಮೂರನೆ ಅಲೆ ಆರಂಭವಾಗಿದೆ. ರಾಜ್ಯದಲ್ಲೂ 2 ಸಾವಿರ ಪ್ರಕರಣಗಳು ಪತ್ತೆಯಾಗುತ್ತಿವೆ. ಅದರರ್ಥ ನಮ ರಾಜ್ಯದಲ್ಲೂ ಮೂರನೇ ಅಲೆ ಶುರುವಾಗಿದೆ. ಆದರೆ ಕೋವಿಡ್ ಮುಂಜಾಗೃತೆ, ನಿಯಂತ್ರಣದ ಬಗ್ಗೆ ಗಮನ ಹರಿಸುವುದು ಬಿಟ್ಟು ಸಿಎಂ ಬೊಮ್ಮಾಯಿ ಸಂಪುಟ ರಚನೆಗೆ ಪದೇ ಪದೇ ದೆಹಲಿಗೆ ಹೋಗುತ್ತಿರುವುದು ಎಷ್ಟು ಸರಿ? ಬೊಮ್ಮಾಯಿ ಬಗ್ಗೆ ಏನೂ ಹೇಳಲ್ಲ, ಅವರು ನೂತನ ಸಿಎಂ ಹಾಗಾಗಿ ನಾನು ಟೀಕೆ ಮಾಡಲ್ಲ ಎಂದು ಹೇಳಿದರು.
ಸಂಪುಟ ರಚನೆಗೆ ಸಂಜೆಯೇ ಮುಹೂರ್ತ ಫಿಕ್ಸ್; ಬ್ಯಾಲೆನ್ಸ್ ಸಂಪುಟಕ್ಕೆ ಒತ್ತು ಎಂದ ಸಿಎಂ

Related Articles

Back to top button