ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆವರು ಹರಿಸಿ ಬೆಳೆಗಳನ್ನು ಬೆಳದ ರೈತರ ಶ್ರಮ ದಲ್ಲಾಳಿಗಳ ಪಾಲಾಗುವದನ್ನ ತಪ್ಪಿಸಿ ರೈತರಿಗೆ ಸ್ವಾಭಿಮಾನ ಬದುಕು ಕಟ್ಟಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆ ಜಾರಿಗೆ ತಂದಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಬೆಳಗಾವಿ ಗ್ರಾಮಾಂತರ ಬಿಜೆಪಿ ಜಿಲ್ಲಾ ಘಟಕದಿಂದ ಶುಕ್ರವಾರ ಮಾರಿಹಾಳ ಗ್ರಾಮದ ಶಿವಬಸವ ಕಲ್ಯಾಣಮಂಟಪದಲ್ಲಿ ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮದಿನಾಚರಣೆ, ಪ್ರಧಾನ ಮಂತ್ರಿ ಮೋದಿಜಿ ಕಿಸಾನ ಸಮ್ಮಾನ 7ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮದ ನೇರ ಪ್ರಸಾರ ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವುದರ ಮೂಲಕ ಉದ್ಘಾಟನೆಗೊಳಿಸಿ ಮಾತನಾಡಿ, ರೈತರು ದಲ್ಲಾಳಿಗಳ ಕಪಿಮುಷ್ಠಿಯಲ್ಲಿ ಸಿಕ್ಕುಹಾಕಿಕೊಂಡು ತಮ್ಮದೆ ಬೆಳೆ ಮಾರಾಟ ಮಾಡಿದರು ಮುಂಗಡ ಹಣಕ್ಕೆ ಬಡ್ಡಿಕಟ್ಟಿ ಸಾಲದ ಸುಳಿಯಲ್ಲಿರುವ ರೈತರ ನೈಜಸ್ಥಿಯನ್ನರಿತು ಮುಕ್ತ ಮಾರಾಟ ವ್ಯವಸ್ಥೆ ಜಾರಿಗೆ ತರಲಾಗಿದೆ. ಎಲ್ಲಾ ಕೃಷಿ ಉತ್ಪನ್ನಗಳ ಮಾರಾಟ ಕೆವಲ ದಲ್ಲಾಳಿಗಳ ಮುಖಾಂತರವೇ ಎಪಿಎಂಸಿಯಲ್ಲಿ ಮಾಡುವದನ್ನು ತಪ್ಪಿಸಿ ದೇಶದ ಯಾವ ಭಾಗದಲ್ಲಿ ರೈತರ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಇದೆಯೊ ಅಲ್ಲಿ ಮಾರಾಟ ಮಾಡಲು ಬೆಳೆ ಬೆಳೆದ ರೈತ ಸ್ವತಂತ್ರವಾಗಿರಲು ಅವಕಾಶ ಕಲ್ಪಿಸುವ ಕಾನೂನಿಗೆ ರೈತನ ಆಸ್ತಿಯನ್ನೆ ಕಬಳಿಸುವ ಕಾಯ್ದೆ ಎಂಬ ಕಲ್ಪನೆ ರೈತರಲ್ಲಿ ಮೂಡಿಸುತ್ತಿರುವದು ಸಮಂಜಸವಲ್ಲ ಎಂದರು.
ಎಪಿಎಂಸಿಗಳನ್ನು ಮುಚ್ಚುವ ಹಾಗೂ ಎಮ್ ಎಸ್ ಪಿ ರದ್ದತಿ ಮಾಡುವ ಯಾವದೆ ಅಂಶಗಳು ಈ ಕಾನೂನಿನಲ್ಲಿ ಇಲ್ಲ. ಬಿಜೆಪಿ ರೈತಪರ ಸರ್ಕಾರ. ರೈತರನ್ನು ದಾರಿ ತಪ್ಪಿಸುವ ವಿರೋಧ ಪಕ್ಷದ ನಡೆಯನ್ನು ಖಂಡಿಸಿದರು.
ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮಾತನಾಡಿ, ದೇಶ ಕಂಡ ಅಜಾತ ಶತೃ ಅಟಲಬಿಹಾರಿ ವಾಜಪೇಯಿ ಸತ್ಯದ ದಾರಿಯಲ್ಲಿ ತತ್ವ ಸಿದ್ದಾಂತ ರಾಜಕೀಯ ದಾರಿಯಲ್ಲಿ ಸಾಗಿಬಂದ ರಾಜಕೀಯ ಸಂತ ಅಟಲಜಿಯವರು ತಮ್ಮ ಜೀವನವನ್ನೆ ಭಾರತಾಂಭೆಯ ಸೇವೆಗೆ ಮುಡಿಪಾಗಿಟ್ಟಿದ್ದರು. ಬಾಂಗ್ಲಾ ಮೇಲೆ ದಾಳಿಮಾಡಿದ್ದ ಪಾಕಿಸ್ತಾನದ ನೀಚ ಬುದ್ದಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಸೈನ್ಯಕಳಿಸಿ ವಿಜಯ ಸಾಧಿಸಿದ್ದನ್ನು ಸಂಸತ್ತಿನಲ್ಲಿ ವಿರೋಧ ಪಕ್ಷದಲ್ಲಿದ್ದರು ಅಟಲಜಿಯವರು ಮುಕ್ತ ಕಂಠದಿಂದ ಹೊಗಳಿದ್ದು ಅವರ ಪ್ರಮಾಣಿಕತೆಯ ಪ್ರತೀಕ ಎಂದರು.
ಹಳ್ಳಿಯಲ್ಲಿ ಜನಿಸಿ ಆರ್.ಎಸ್.ಎಸ್. ಕಾರ್ಯಕರ್ತರಾಗಿ ಜನಸಂಘದ ಶಿಸ್ತಿನ ಸಿಪಾಯಿಗಳಾಗಿ ಬಿಜೆಪಿಯ ಮೊದಲ ರಾಷ್ಟ್ರೀಯ ಅಧ್ಯಕ್ಷರಾಗಿ ಕಾಂಗ್ರೆಸ್ ಹೊರತಾದ ಮೂರು ಬಾರಿ ಪ್ರಧಾನಿಗಳಾಗಿ 5 ವರ್ಷ ಪೂರ್ಣವಧಿ ಅಧಿಕಾರ ನಡೆಸಿದ ಧಿಮಂತ ನಾಯಕರಾಗಿದ್ದ ವಾಜಪೇಯಿಯವರ ಕಾಯಕಮಯ ಜೀವನ ಇಂದು ನಮಗೆ ಆದರ್ಶವಾಗಿದೆ. ಅಂತವರು ಸ್ಥಾಪಿಸಿದ ಪಾರ್ಟಿಯಲ್ಲಿರುವ ನಾವೆ ಧನ್ಯ. ಅವರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಾವೆಲ್ಲರೂ ಸಾಗೊಣ . ಅಂದು ಸಂಸತ್ತಿನಲ್ಲಿ ಅಪಹಾಸ್ಯ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ ವಾಜಪೇಯಿಜಿ ನಮ್ಮಬ್ಬಿರನ್ನ ನೋಡಿ ಅಪಹಾಸ್ಯ ಮಾಡೋ ಕಿಂಗ್ ನಾಯಕರೆ ಮುಂದೊಂದು ದಿನ ವಿರೋಧ ಪಕ್ಷದಲ್ಲಿಯೂ ಕುಳಿತುಕೊಳ್ಳವ ಯೋಗ್ಯತೆಯನ್ನು ಕಳೆದುಕೊಳ್ಳಲಿದ್ದಿರಿ ಎಂಬ ಮಾತು ಸತ್ಯವಾದ ನಂತರವೆ ತಮ್ಮ ದೇಹ ತ್ಯಾಗ ಮಾಡಿದ ಮಹಾನ ನಾಯಕ ಅಟಲಜಿಯವರು ಎಂದರು.
ಬೆಳಗಾವಿ ಗ್ರಾ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಸಂಜಯ ಪಾಟೀಲ ಅಧ್ಯಕ್ಷತೆವಹಿಸಿ ಮಾತನಾಡಿ, ರೈತರ ಸಂಕಷ್ಟಕ್ಕೆ ಸಹಕಾರಿಯಾಗಲು ಪ್ರಧನಮಂತ್ರಿ ಕಿಸಾನ ಸಮ್ಮಾನ ಯೋಜನೆಯ 7ನೇ ಕಂತು ಯಾವ ಮದ್ಯವರ್ತಿಯು ಇಲ್ಲದೆ ದೇಶದ 9 ಕೋಟಿ ರೈತರ ಖಾತೆಗಳಿಗೆ 18 ಸಾವಿರ ಕೋಟಿ ರೂಪಾಯಿಗಳು ಒಂದೆ ಬಟನ್ ಮೂಲಕ ಜಮೆಯಾಗುತ್ತಿರುವದು ದೇಶ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಾಂತ್ರಿಕವಾಗಿ ಎಷ್ಟೋಂದು ಮುಂದುವರೆದಿದೆ ಹಾಗೂ ಜನಧನ ಖಾತೆಯಿಂದ ಜನಸಾಮನ್ಯನ ಬಾಳು ಎಷ್ಟೋಂದು ಹಸನಾಗುತ್ತಿದೆ ಎಂದು ತಿಳಿಯುತ್ತಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೊಹಿತೆ, ರಾಜು ಚಿಕ್ಕನಗೌಡರ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಮಾಧ್ಯಮ ಪ್ರಮುಖ ಎಫ್.ಎಸ್.ಸಿದ್ದನಗೌಡರ, ಉಪಾಧ್ಯಕ್ಷ ಯುವರಾಜ ಜಾಧವ, ಡಾ.ಗುರು ಕೋತಿನ, ರಾಜು ದೇಸಾಯಿ, ಶಂಕರ ಜತ್ರಾಟಿ, ವೇದಿಕೆ ಮೇಲಿದ್ದರು.
ಈ ಸಂದರ್ಭದಲ್ಲಿ ಅಟಲಬಿಹಾರಿ ವಾಜಪೇಯಿಯವರ ಭಾವಚಿತ್ರಕ್ಕೆ ಪುಶ್ಪನಮನಃ ಸಲ್ಲಿಸಲಾಯಿತು. ಗ್ರಾಮೀಣ ಭಾಗದ ಪ್ರಗತಿಪರ ರೈತರ ಸತ್ಕಾರ ನೇರವೆರಿಸಲಾಯಿತು. ಪ್ರಧಾನಮಂತ್ರಿಗಳ ನೇರ ಪ್ರಸಾರ ನೋಡಲು ಸಾಮೂಹಿಕ ಪರದೆ ವ್ಯವಸ್ಥೆಮಾಡಲಾಗಿತ್ತು.ರೈತರ ಜೋತೆಯಲ್ಲಿ ಎಲ್ಲ ನಾಯಕರು ಕಾರ್ಯಕ್ರಮ ವೀಕ್ಷಿಸಿದರು. ಯಲ್ಲೇಶ ಕೊಲಕಾರ ಕಾರ್ಯಕ್ರಮ ನಿರೂಪಿಸಿದರು ಡಾ.ಗುರು ಕೋತಿನ ವಂದಿಸಿದರು. ಕಾರ್ಯಕ್ರಮದಲ್ಲಿ ಅಭಯ ಅವಲಕ್ಕಿ, ವೀರಭದ್ರ ಪೂಜಾರ, ಅಡವೇಶ ಅಂಗಡಿ, ನೀತಿನ ಚೌಗಲೆ, ಮಹೇಶ ಜತ್ರಾಟಿ, ಕಮಲಾಕರ ಕೋಲಕಾರ, ಹಾಗೂ ನೂರಾರು ಕಾರ್ಯಕರ್ತರು ರೈತರು ಇದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ