Belagavi NewsBelgaum News

*ಬೆಳಗಾವಿಯಲ್ಲಿ ಘೋರ ಘಟನೆ: ಬೀದಿನಾಯಿ ದಾಳಿಗೆ ನರಳಿ ನರಳಿ ಪ್ರಾಣಬಿಟ್ಟ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ: ರಾಜ್ಯದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆ ಜಿಲ್ಲೆಗಳಲ್ಲಿಯೂ ಈ ಬಗ್ಗೆ ಸಾಕಷ್ಟು ದೂರುಗಳು ಬಂದರೂ, ಜನರ ಆಕ್ರೋಶ ವ್ಯಕ್ತವಾದರೂ ಸಂಬಂಧಪಟ್ತ ಅಧಿಕಾರಿಗಳು ಮಾತ್ರ ಬೀದಿನಾಯಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ.

ಬೆಳಗಾವಿಯಲ್ಲಿ ಬೀದಿನಾಯಿ ದಾಳಿಗೆ ವ್ಯಕ್ತಿಯೋರ್ವರು ಬಲಿಯಾಗಿದ್ದಾರೆ. ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಿವಶಂಕರ್ ಬಸವೆಣ್ಣಪ್ಪ ಪರಸಪ್ಪಗೋಳ ಮೃತ ದುರ್ದೈವಿ.

Related Articles

ಆರು ತಿಂಗಳ ಹಿಂದೆ ಶಿವಶಂಕರ್ ಗೆ ಬೀದಿನಾಯಿ ಕಚ್ಚಿತ್ತು. ಇದರಿಂದ ನಂಜುಹೆಚ್ಚಾಗಿ ಊಟ, ನೀರು ಬಿಟ್ಟಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.


Home add -Advt

Related Articles

Back to top button