Latest

ನಿಪ್ಪಾಣಿ: ವಿದ್ಯುತ್ ತಂತಿ ಸ್ಪರ್ಶಿಸಿ ವಿದ್ಯಾರ್ಥಿನಿ ಸಾವು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿದ್ಯಾರ್ಥಿನಿ ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಡೋಣೆವಾಡಿಯಲ್ಲಿನ ಶಾಲೆಯಲ್ಲಿ ನಡೆದಿದೆ.

9 ವರ್ಷದ ಅನುಷ್ಕಾ ಸದಾಶಿವ ಬೆಂಡೆ ಮೃತ ವಿದ್ಯಾರ್ಥಿನಿ. ನಿನ್ನೆಯೇ ಈ ದುರಂತ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಶಾಲೆಯಲ್ಲಿ ಶೌಚಾಲಯಕ್ಕೆಂದು ಹೋದ ವಿದ್ಯಾರ್ಥಿನಿ ವಿದ್ಯುತ್ ಕಂಬ ಸ್ಪರ್ಶಿಸಿ ಮೃತಪಟ್ಟಿದ್ದಾಳೆ. ಶೌಚಾಲಯದ ಬಳಿ ಇದ್ದ ಕಂಬದ ಸಹಾಯದಿಂದ ಶಾಲೆಯ ಬಳಿಯಿದ್ದ ಮನೆಯವರು ವಿದ್ಯುತ್ ಸಂಪರ್ಕ ಪಡೆದಿದ್ದರು. ಕಂಬದಲ್ಲಿ ವಿದ್ಯುತ್ ಪ್ರವಹಿಸಿದ ಪರಿಣಾಮ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಘಟನೆಯ ವೇಳೆ ಮುಖ್ಯಶಿಕ್ಷಕ ಕುಮಾರ್ ನಾಟೇಕರ್ ಶಾಲೆಯಲ್ಲಿ ಇರಲಿಲ್ಲ. ಬೆಳಿಗ್ಗೆ ಶಾಲೆಗೆ ಬಂದ ಶಿಕ್ಷಕ ಸಹಿ ಮಾಡಿ ವಾಪಸ್ ತೆರಳಿದ್ದರು ಎನ್ನಲಾಗಿದೆ. ಇದೀಗ ಅವಘಡದ ಬೆನ್ನಲ್ಲೇ ಶಾಲೆಯ ಮುಖ್ಯಶಿಕ್ಷಕ ಕುಮಾರ್ ನಾಟೇಕರ್ ಅವರನ್ನು ಕೆಲಸದಿಂದ ವಜಾ ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್; ಆಪ್ತ ಮಹಾಂತೇಶ್ ಪತ್ನಿ ವನಜಾಕ್ಷಿ ಬಂಧನ

Home add -Advt

Related Articles

Back to top button