*ಬೆಳಗಾವಿಯಲ್ಲಿ ಘೋರ ದುರಂತ; ಕಾರು ತೊಳೆಯಲು ಹೋದ ಬಾಲಕ ವಿದ್ಯುತ್ ತಂತಿ ಸ್ಪರ್ಶಿಸಿ ಸಾವು*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ವಿದ್ಯುತ್ ಅವಘಡಕ್ಕೆ ಬಾಲಕನೊಬ್ಬ ಬಲಿಯಾಗಿರುವ ಘಟನೆ ನಡೆದಿದೆ. ಕಾರು ತೊಳೆಯಲೆಂದು ಹೋದ ಬಾಲಕ ಕರೆಂಟ್ ಶಾಕ್ ನಿಂದ ಮೃತಪಟ್ಟಿರುವ ಘಟನೆ ಭಾಗ್ಯನಗರದ 10ನೇ ಕ್ರಾಸ್ ನಲ್ಲಿ ನಡೆದಿದೆ.
ರಜತ್ ಗೌರವ್ (14) ಮೃತ ಬಾಲಕ. ಉತ್ತರ ಪ್ರದೇಶ ಮೂಲದವನು ಎಂದು ತಿಳಿದುಬಂದಿದೆ. ಭಾಗ್ಯ ನಗರದ 10ನೇ ಕ್ರಾಸ್ ನಲ್ಲಿ ಉತ್ತರ ಪ್ರದೇಶ ಮೂಲದ ಕುಟುಂಬವೊಂದು ವಾಸವಾಗಿತ್ತು.
ರಜತ್ ಗೌರವ್ 8ನೇ ತರಗತಿಯಲ್ಲಿ ಓದುತ್ತಿದ್ದ. ರಜೆ ಇದ್ದ ಕಾರಣ ಮುಂಜಾನೆ ಪೇಪರ್ ಹಾಕುತ್ತಿದ್ದ. ಎಂದಿನಂತೆ ಪೇಪರ್ ಹಾಕಲು ಹೋಗಿದ್ದ ಈ ವೇಳೆ ಚೌಗಲೆ ಮನೆಯವರು ಇಂದು ಕಾರು ತೊಳೆಯುವಂತೆ ಹೇಳಿದ್ದರು. ಬಾಲಕ ಕಾರು ತೊಳೆಯಲೆಂದು ಹೋಗಿದ್ದಾಗ ಪಕ್ಕದಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಸಾವನ್ನಪ್ಪಿದ್ದಾನೆ.
ಚೌಗಲೆ ಕುಟುಂಬದ ನಿರ್ಲಕ್ಷ್ಯವೇ ಬಾಲಕನ ಸಾವಿಗೆ ಕಾರಣ ಎಂದು ಕುಟುಂಬದವರು ಆರೋಪಿಸಿದ್ದಾರೆ. ಕರೆಂಟ್ ಶಾಕ್ ಹೊಡೆದ ತಕ್ಷಣ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿಲ್ಲ. ಆಸ್ಪತ್ರೆಗೆ ಕರೆದೊಯ್ದಿದ್ದರೆ ಬಾಲಕ ಬದುಕುತ್ತಿದ್ದ. ಘಟನೆ ನಡೆದ ಕೆಲ ಸಮಯದ ನಂತರ ನಮೆಗೆ ಹೇಳಿದ್ದಾರೆ. ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಕಾರಿನ ಪಕ್ಕದಲ್ಲಿ ರಜತ್ ಗೌತಮ್ ಶವಾಗಿ ಬಿದ್ದಿದ್ದ ಎಂದು ರಜತ್ ಚಿಕ್ಕಪ್ಪ ಆರೋಪಿಸಿದ್ದಾರೆ.
ಚೌಗಲೇ ಕುಟುಂಬದ ಬೇಜವಾಬ್ದಾರಿಯಿಂದಲೇ ದುರಂತ ಸಂಭವಿಸಿದೆ ಎಂದು ಬಾಲಕನ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ