Belagavi NewsBelgaum News

*ಬೆಳಗಾವಿ: ಮಕ್ಕಳ ಮಾರಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಭ್ರೂಣಹತ್ಯೆ ಮಾಡಿ ಹೂತಿಟ್ಟಿದ್ದ ನಕಲಿ ವೈದ್ಯ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯ ಕಿತ್ತೂರಿನಲ್ಲಿ ನಡೆದ ಮಕ್ಕಳ ಮಾರಾಟ ಪ್ರಕರಣದ ನಕಲಿ ವೈದ್ಯನ ಮತ್ತೊಂದು ಕರಾಳಮುಖ ಬಯಲಾಗಿದೆ. ಭ್ರೂಣಹತ್ಯೆ ಮಾಡಿ ಅವುಗಳನ್ನು ತೋಟದಲ್ಲಿ ಹೂತಿಟ್ಟಿದ್ದ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.

ನಕಲಿ ವೈದ್ಯ ಅಬ್ದುಲ್ ಗಾಫರ್ ಲಾಡಖಾನ ಭ್ರೂಣಹತ್ಯೆ ಮಾಡುತ್ತಿದ್ದ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸೂಚನೆ ಮೇರೆಗೆ ಕಿತ್ತೂರು ಪೊಲೀಸರು ಅಬ್ದುಲ್ ಗಾಫರ್ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ, ಭ್ರೂಣಹತ್ಯೆ ಮಾಡಿ ಹೋತಿಟ್ಟುಇರುವುದು ಪತ್ತೆಯಾಗಿದೆ.

ಅಬ್ದುಲ್ ಗಾಫರ್ ತೋಟದಲ್ಲಿ ಮೂರು ಭ್ರೂಣಗಳ ಕಳೇಬರ ಪತ್ತೆಯಾಗಿದೆ. ಪೊಲೀಸರು ಕಳೇಬರ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ. ಇದೇ ವೇಳೆ ಅಬ್ದುಲ್ ಗಾಫರ್ ಸಹಾಯಕ ರೋಹಿತ್ ಕುಪ್ಪಸಗ್ಪುಡರ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Home add -Advt


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button