Belagavi NewsBelgaum NewsKarnataka NewsLatest
*ಬೆಳಗಾವಿಯಲ್ಲಿ ಆಸ್ತಿಗಾಗಿ ನಡುರಸ್ತೆಯಲ್ಲೇ ಹೊಡೆದಾಡಿಕೊಂಡ ಕುಟುಂಬಸ್ಥರು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆಸ್ತಿ ವಿಷಯಕ್ಕಾಗಿ ಕುಟುಂಬಸ್ಥರೇ ರಸ್ತೆಯಲ್ಲಿ ಭೀಕರವಾಗಿ ಹೊಡೆದಾಡಿಕೊಂಡಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಚಿಂಚಲಿ ಪಟ್ಟಣದ ನಿವಾಸಿ ಸುನೀಲ ಸಗರೇ ಹಾಗೂ ಅವರ ಕುಟುಂಬದ ಮೇಲೆ ಸಂಜು ಸೌಂದಲಗಿ ಹಾಗೂ ಆತನ ಕುಟುಂಬಸ್ಥರು ಸೇರಿಕೊಂಡು ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಸುನಿಲ್ ಸಗರೇ ಸುಮಾರು ವರ್ಷಗಳಿಂದ ಚಿಂಚಲಿ ಪಟ್ಟಣದ ಆಸ್ತಿ ಸಂಖ್ಯೆ 1014/1, 1014/2, 1014/3, 1014/4 ಸರ್ವೇ ನಂಬರನಲ್ಲಿ ವಾಸವಿದ್ದರು. ಈ ಆಸ್ತಿಯಲ್ಲಿ ನಮಗೂ ಪಾಲುದಾರಿಕೆ ಇದೆ ಎಂದು ಸುನಿಲ್ ಸಗರೇ ಮತ್ತು ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಘಟನೆಯಲ್ಲಿ ಸುನಿಲ್ ಸಗರೇ ಅವರ ತಲೆಗೆ ಗಂಭೀರವಾದ ಪೆಟ್ಟು ಬಿದ್ದಿದ್ದು ಹಾರೂಗೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸ್ಥಳಕೆ ಕುಡಚಿ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



