Belagavi NewsBelgaum News

*ಬೆಳಗಾವಿ: ತಂದೆ ಹಾಗೂ ಇಬ್ಬರು ಮಕ್ಕಳು ನೀರುಪಾಲು*

ಪ್ರಗತಿವಾಹಿನಿ ಸುದ್ದಿ: ಮೀನು ಹಿಡಿಯಲೆಂದು ಹೋಗಿದ್ದ ವೇಳೆ ದುರಂತ ಸಂಭವಿಸಿದ್ದು, ತಂದೆ ಹಾಗೂ ಇಬ್ಬರು ಮಕ್ಕಳು ನೀರುಪಾಲಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ ನಡೆದಿದೆ.

ಬೆನಕನಹೊಳಿ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದರು. ಈ ವೇಳೆ ಮೂವರು ನೀರುಪಾಲಾಗಿ ಸಾವನ್ನಪ್ಪಿದ್ದಾರೆ.

ಬೆನಕನಹೊಳಿ ಗ್ರಾಮದ ಲಕ್ಷ್ಮಣರಾಮ ಅಂಬಲಿ (49) ಹಾಗೂ ಮಕ್ಕಳಾದ 14 ವರ್ಷದ ಹಾಗೂ 12 ವರ್ಷದ ಇಬ್ಬರು ಪುತ್ರರು ನೀರಿನಲ್ಲಿ ಮುಳುಗಿದ್ದಾರೆ. ನಿನ್ನೆಸ್ಂಜೆ ಮೀನಿನ ಬಲೆ ಹಾಕುವಗ ಈ ದುರಂತ ಸಂಭವಿಸಿದೆ.

Home add -Advt

ಘಟನಾ ಸ್ಥಳಕ್ಕೆ ಅಗ್ನಿಶಮಕ ಸಿಬ್ಬದಿ, ಪೊಲೀಸರು ಭೇಟು ನೀಡಿ ಮೂವರಿಗಾಗಿ ಶೋಧಕಾರ್ಯ ನಡೆಸಲಾಗಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Related Articles

Back to top button