Belagavi NewsBelgaum News

*ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ: ಬಾಣಂತಿ,ಕಂದಮ್ಮ ಸೇರಿ ಇಡೀ ಕುಟುಂಬವನ್ನೇ ಮನೆಯಿಂದ ಹೊರ ಹಾಕಿದ ಫೈನಾನ್ಸ್ ಕಂಪನಿ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಸಾಲ ಮರುಪಾವತಿ ಮಾಡಿಲ್ಲ ಎಂದು ಫೈನಾನ್ಸ್ ಕಂಪನಿಯವರು ಬಾಣಂತಿ ಸೇರಿ ಇಡಿ ಕುತುಂಬವನ್ನೇ ಮನೆಯಿಂದ ಹೊರ ಹಾಕಿ, ಮನೆಗೆ ಬೀಗ ಹಾಕಿ ಹೋಗಿರುವ ಘಟನೆ ನಡೆದಿದೆ.

ರಾತ್ರಿಯಿಡಿ ಮನೆಯ ಹೊರಗೆ ಮೈಕೊರೆವ ಚಿಳಿಯಲ್ಲಿಯೇ ಅನ್ನ-ನೀರು ಇಲ್ಲದೇ ಒಂದುವರೆ ತಿಂಗಳ ಬಾಣಂತಿ, ಹಸುಗೂಸು ಸೇರಿದಂತೆ ಕುಟುಂಬ ಕಾಲಕಳೆದಿದೆ. ಫೈನಾನ್ಸ್ ಕಂಪನಿ ಅಧಿಕಾರಿ, ಸಿಬ್ಬಂದಿಗಳಿಗೆ ಸ್ವಲ್ಪ ಕಾಲಾವಕಾಶ ನೀಡಿ, ಬಾಣಂತಿ, ಹಸುಗೂಸು ಇದ್ದು, ಮನೆಯ ಒಂದು ಭಾಗದಲ್ಲಿ ಇರಲು ಅವಕಾಶ ನೀಡುವಂತೆ ಕುಟುಂಬ ಕಣ್ಣೀರಿಟ್ಟು ಕೇಳಿದರೂ ಫೈನಾನ್ಸ್ ಕಂಪನಿಯವರ ಮನಸ್ಸು ಕರಗಿಲ್ಲ. ಮನುಷತ್ವ ಮರೆತು ಬಾಣಂತಿ, ಕಂದಮ್ಮ ಸೇರಿದಂತೆ ಕುಟುಂಬದವರನ್ನು ಮನೆಯಿಂದ ಹೊರಹಾಕಿ ಮನೆಗೆ ಬೀಗ ಜಡಿದು ಹೋಗಿದ್ದಾರೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ನಾಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಚೆನ್ನೈ ಮೂಲದ ಇಕ್ವಿಟಾಸ್ ಸ್ಕಾಲ್ ಫೈನಾನ್ಸ್ ಕಂಪನಿಯಲ್ಲಿ ಎರಡುವರೆ ವರ್ಷದ ಹಿಂದೆ ಹೈನುಗಾರಿಕೆಗೆಂದು ಶಂಕ್ರಪ್ಪ ಗದ್ದಾಡಿ ಎಂಬ ರೈತ 5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಹಣ ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಫೈನಾನ್ಸ್ ಕ್ಲಂಪನಿಯವರು ಏಕಾಏಕಿ ಗ್ರಾಮಕ್ಕೆ ಬಂದು ಮನೆಯವರನ್ನು ಹೊರ ಹಾಕಿ ಮನೆ ಸೀಜ್ ಮಾಡಿ ಬೀಗ ಜಡಿದು ಹೋಗಿದ್ದಾರೆ. ಬೇರೆ ದಾರಿ ಕಣದೇ ಮನೆಯ ಹೊರಗೆ ಕುಟುಂಬದವರು ಮೈ ಕೊರೆವ ಚಳಿಯಲ್ಲಿ ಕಣ್ಣೀರಿಟ್ಟಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button