Belagavi NewsBelgaum NewsKarnataka News
*ಬೆಳಗಾವಿ: ಚಲಿಸುತ್ತಿದ್ದ ಕಾರಿನ ಮೇಲೆ ಫೈರಿಂಗ್: ರೌಡಿಶೀಟರ್ ಪ್ರಫುಲ್ ಪಟೇಲ್ ಹತ್ಯೆಗೆ ಯತ್ನ*
ಪ್ರಗತಿವಾಹಿನಿ ಸುದ್ದಿ: ಅಪರಿಚಿತರಿಂದ ರೌಡಿಶೀಟರ್ ಮೇಲೆ ಫೈರಿಂಗ್ ನಡೆದಿದ್ದು, ರೌಡಿಶೀಟರ್ ಪ್ರಫುಲ್ ಪಟೇಲ್ ಹತ್ಯೆಗೆ ಯತ್ನ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೆಳಗುಂದಿ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಪ್ರಫುಲ್ ಪಟೇಲ್ ಕಾರಿನಲ್ಲಿ ಬೆಳಗುಂದಿಯ ತಮ್ಮ ಮನೆಗೆ ಹೋಗುತ್ತಿದ್ದಾಗ, ಅಪರಿಚಿತರ ಗುಂಪು ಗುಂಡಿನ ದಾಳಿ ನಡೆಸಿದೆ.
ಕಾರಿನ ಗಾಜಿಗೆ ಗುಂಡೇಟು ತಗುಲಿ, ಗಾಜು ಒಡೆದು ಪ್ರಫುಲ್ ಪಟೇಲ್ ಮುಖ, ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗಾಯಾಳು ರೌಡಿಶೀಟರ್ ಪ್ರಫುಲ್ ಪಟೇಲ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ