Belagavi NewsBelgaum News

*ಬೆಳಗಾವಿಯಲ್ಲಿ ನಿಲ್ಲದ ಪ್ರವಾಹ: ಅಡಿಬಟ್ಟಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳು ಮುಳುಗಡೆ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ ಜಿಲ್ಲೆಯಲ್ಲಿ ನದಿಗಳ ಆರ್ಭಟಕ್ಕೆ ವಿವಿಧೆಡೆ ಗ್ರಾಮಗಳೇ ಮುಳುಗಡೆಯಾಗಿದ್ದು, ಜನ, ಜಾನುವಾರುಗಳು ಅತಂತ್ರವಾಗಿವೆ.

ಬೆಳಗಾವಿಯಲ್ಲಿ ಒಂದೆಡೆ ಘಟಪ್ರಭಾ, ಮಲಪ್ರಭಾ ಅಬ್ಬರ ಜೋರಾಗಿದ್ದರೆ ಇನ್ನೊಂದೆಡೆ ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಅಡಿಬಟ್ಟಿ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಜಮೀನು ಮನೆಗಳು ಸಂಪೂರ್ಣ ಮುಳುಗಡೆಯಾಗಿದ್ದು, ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸುವ ಕೆಲವನ್ನು ರಕ್ಷಣಾ ಸಿಬ್ಬಂದಿ ಕೈಗೊಂಡಿದ್ದಾರೆ.

ಇನ್ನು ಮಲಪ್ರಭಾ ನದಿ ಪ್ರವಾಹಕ್ಕೆ ರಾಮದುರ್ಗ ಬಳಿ ತೇರ ಬಜಾರ್ ಸೇತುವೆ ಸಂಪೂರ್ಣ ಮುಳುಗಡೆಯಾಗಿದೆ. ಸೇತುವೆಯ ಮೇಲೆ ನದಿ ನೀರು ರಭಸದಿಂದ ಹರಿಯುತ್ತಿದ್ದು, ಈ ಭಾಗದ ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಕುಟುಂಬಗಳ ಸ್ಥಳಾಂತರಕ್ಕೂ ಸಮಸ್ಯೆಯಾಗಿದೆ.

Home add -Advt

Related Articles

Back to top button