Belagavi NewsBelgaum News

*ಬೆಳಗಾವಿ: ಭೀಕರ ಪ್ರವಾಹಕ್ಕೆ ನದಿಯಲ್ಲಿ ತೇಲಿ ಬರುತ್ತಿವೆ ಎಮ್ಮೆಗಳ ಕಳೇಬರಹ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ 7 ನದಿಗಳ ಅಬ್ಬರಕ್ಕೆ ಭೀಕರ ಪ್ರವಾಹವುಂಟಾಗಿದ್ದು, ನೂರಾರು ಗ್ರಾಮಗಳೇ ಸಂಪೂರ್ಣ ಮುಳುಗಡೆಗಾವೆ. ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಜನ-ಜಾನುವಾರುಗಳು ಅತಂತ್ರವಾಗಿದ್ದು, ಸಂಕಷ್ಟ ಎದುರಾಗಿದೆ.

ಪ್ರವಾಹದ ಅಬ್ಬರಕ್ಕೆ ಸಿಲುಕಿ ಜಾನುವಾರುಗಳು ಸಾವನ್ನಪ್ಪುತ್ತಿದ್ದು, ನದಿ, ಹಳ್ಳ-ಕೊಳ್ಳಗಳಲ್ಲಿ ದನಗಳ ಕಳೇಬರಹ ತೆಲಿ ಬರುತ್ತಿವೆ. ಮೂಡಲಗಿ ತಾಲೂಕಿನ ವಡೇರಟ್ಟಿ ಗ್ರಾಮದಲ್ಲಿ ನದಿ ನೀರಿನಲ್ಲಿ ಎಮ್ಮೆಗಳ ಮೃತದೇಹ ತೇಲಿ ಬಂದಿವೆ.

ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿರುವ ಎಮ್ಮೆಗಳು ನದಿ ನೀರಿನಲ್ಲಿ ತೇಲಿ ಬಂದಿದ್ದು, ಗ್ರಾಮಸ್ಥರು ನೆರೆಯ ಭೀಕರತೆ ಎಷ್ಟಿದೆ ಎಂಬುದನ್ನು ಸರ್ಕಾರ ಗಮನ ಹರಿಸಬೇಕು ಎಂದು ಕಣ್ಣೀರಿಟ್ಟಿದ್ದಾರೆ.

ಜಿಲ್ಲೆಯಲ್ಲಿ ಪ್ರವಾಹದ ಅಬ್ಬರ ಹೆಚ್ಚುತ್ತಲೇ ಇದೆ. ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದು, ಜನರು ಊರು ತೊರೆದು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆ. ಆದರೆ ಕಾಳಜಿ ಕೇಂದ್ರಗಳಲ್ಲಿಯೂ ದಿನದಿಂದ ದಿನಕ್ಕೆ ಅವ್ಯವಸ್ಥೆ ಹೆಚ್ಚುತ್ತಿದ್ದು, ಆಹಾರ, ಔಷಧಿ, ಬಟ್ಟೆ ಇತ್ಯಾದಿ ಅಗತ್ಯ ವಸ್ತುಗಳ ಕೊರತೆಯಿಂದ ಬಾಣಂತಿಯರು, ನವಜಾತ ಶಿಶುಗಳು, ಮಕ್ಕಳು, ಹಿರಿಯರು ಪರದಾಡುತ್ತಿದ್ದಾರೆ.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button