ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಪಶ್ಚಿಮ ಘಟ್ಟ ಭಾಗದಲ್ಲಿ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ 32 ಸೇತುವೆಗಳು ಮುಳುಗಡೆಯಾಗಿದ್ದು, ಕ್ಷಣ ಕ್ಷಕ್ಕೂ ಪ್ರವಾಹ ಹೆಚ್ಚುತ್ತಿದೆ. ಹಲವು ಗ್ರಾಮಗಳು ಜಲಾವೃತಗೊಂಡಿದ್ದು, ಎಷ್ಟೋ ಗ್ರಾಮಗಳು ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡಿವೆ.
ಗೊಕಾಕ್-ಸಿಂಗಾಪುರ, ಗೊಕಾಕ್ -ಚಿಗಡೊಳ್ಳಿ, ಮುಡಲಗಿ-ಸುಣದೊಳ್ಳಿ, ಸುಣದೊಳ್ಳಿ-ಪಟಗುಂಡಿ, ಮೂಡಲಗಿ ಕಮಲದಿನ್ನಿ, ಕಮಲದಿನಿ-ಹುಣಶಾಡ, ಕುಲಗೊಡ-ಔರಾದಿ, ಔರಾದಿ-ಮಹಾಲಿಂಗಪುರ, ಕುಲಗೊಡ-ಸಣಡೊಳ್ಳಿ ಸಣದೊಳ್ಳಿ-ಮೂಡಳ್ಳಿ, ಕುಳಗೋಡ-ಡವಳೇಶ್ವರ, ದವಳೇಶ್ವರ-ಮಾಹಾಲಿಂಗಪುರ ಸೇತುವೆಗಳು ಜಲಾವೃತಗೊಂಡಿವೆ.
ಇನ್ನು ಸಿಂಗಳಾಪುರ-ಹುಕ್ಕೇರಿ, ಹುಕ್ಕೇರಿ-ನೋಗಿನಾಳ, ನೋಗಿನಾಳ-ಗೋಡಗೇರಿ, ಹುಕ್ಕೇರಿ-ಅರ್ಜುನವಾಡ, ಅರ್ಜುನವಾಡ-ಕುರಣಿ, ಸಂಕೇಶ್ವರ- ,ಯಲ್ಮರಡಿ-ಕುರಣಿ, ಕುರಣಿ-ಕೋಚರಿ, ಯಲಮರಡಿ-ಯರ್ನಾಳ, ಯರ್ನಾಳ- ಹುಕ್ಕೇರಿ, ಯಲಮರಡಿ-ಬೋಡಗೇರಿ, ಬೋಡಗೇರಿ-ನೋಗಿನಾಳ, ಸದಲಗಾ-ಬಜವಾಡಿ, ಬಜವಾಡಿ-ನಿಪ್ಪಾಣಿ, ಸದಲಗಾ-ಬೋಜ, ಬೋಜ-ಕಾರಜಗ, ಸಿದ್ನಾಳ-ಅಕ್ಕೋಳ, ಭೀವಶಿಯಿಂದ -ಜತ್ರಾಟಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ.
ಹಾಲಹಳ್ಳ ಸೇತುವೆ, ನಸಲಾಪುರ-ಅಂಕಲಿ, ಚಿಚ್ಚಳ್ಳಿ ಸೇತುವೆ, ಹಳಿಯಾಳ್-ದರೂರ್, ಉಗಾರ-ಕುಡಚಿ, ಉಗಾರ ಬಿಕೆ-ಉಗಾರ ಕೆ ಹೆಚ್, ರಾಮದುರ್ಗದ ವೆಂಕಟೇಶ್ವರ ದೇವಾಲಯದ ಬಳಿಯ ರಾಮದುರ್ಗ ಸೇತುವೆ, ಘಟಕನೂರ್, ರಂಕಲಕೊಪ್ಪ, ಹಂಪಿಹೊಳಿ, ಅವರಾದಿ, ಸಂಗಲ, ಹಿರೇಮುಳಂಗಿ, ಮಲ್ಲಪುರ-ಗೊನಗನೂರ್, ಖಾನಪೇಟೆ ನರ್ಸರಿ, ರಾಮಪುರ-ಹರಳಪುರ, ಸುನ್ನಲ್-ಹಳೇತೋರಗಲ್ಲ, ಮುನವಳ್ಳಿ-ಶಿಂದೋಗಿ ಸೇರಿದಂತೆ 32 ಸೇತುವೆಗಳು ಮುಳುಗಡೆಯಾಗಿವೆ.
ಮುಂಜಾಗೃತಾಕ್ರಮವಾಗಿ ಸೇತುವಗಳಿಗೆ ತೆರಳುವ ಮಾರ್ಗದಲ್ಲಿ ಅಡ್ಡಲಾಗಿ ಬ್ಯಾರಿಕೇಡ್ ಗಳನ್ನು ಹಾಕಿ ಪೊಲೀಸ್ ಸಿಬ್ಬಂದಿಗಳು ನಿಯೋಜನೆಗೊಂಡಿದ್ದು, ಜನಸಂಚಾರ ನಿರ್ಬಂಧಿಸಿದ್ದಾರೆ.
ಹಿಡಕಲ್ ಜಲಾಶಯದಿಂದ ಘಟಪ್ರಭಾನದಿಗೆ 27,000 ಕ್ಯೂಸೆಕ್ ಗೂ ಅಧಿಕ ನೀರು ಬಿಡಲಾಗಿದ್ದು, ಜಿಲ್ಲೆಯಾದ್ಯಂತ ಪ್ರವಾಹ ಪರಿಸ್ಥಿತಿಯುಂಟಾಗಿದೆ. ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ್ ತಾಲೂಕಿನಲ್ಲಿಯೂ ಪ್ರವಾಹ ಪರಿಸ್ಥಿತಿಯುಂಟಾಗಿದೆ.
CamScanner 09-13-2022 08.51.04
ರಾಜ್ಯದ ಜನರಿಗೆ ಮತ್ತೊಂದು ಶಾಕ್; ಇನ್ನು ಎರಡು ತಿಂಗಳು ಭಾರಿ ಮಳೆ ಎಚ್ಚರಿಕೆ
https://pragati.taskdun.com/latest/heavy-rain2-monthskarnataka/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ