Belagavi NewsBelgaum NewsKannada NewsLatestNationalPolitics

*ಬೆಳಗಾವಿಯಲ್ಲಿ FM ರೇಡಿಯೋ: ಮಾಹಿತಿ ಮತ್ತು ಪ್ರಸಾರ ಸಚಿವರಿಗೆ ಸಂಸದ ಈರಣ್ಣ ಕಡಾಡಿ ಮನವಿ*

ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಬೆಳಗಾವಿಯಲ್ಲಿ ಎಫ್.ಎಂ ರೆಡಿಯೋ ಆರಂಭಿಸಲು ಸಂಸದ ಈರಣ್ಣ ಕಡಾಡಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರಲ್ಲಿ ಮನವಿ ಮಾಡಿದರು.

ನವದೆಹಲಿಯಲ್ಲಿ ಇಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರನ್ನು ಭೇಟಿಯಾದ ಸಂಸದ ಈರಣ್ಣ ಕಡಾಡಿ, ಬೆಳಗಾವಿಯಲ್ಲಿ ಎಫ್.ಎಂ ರೇಡಿಯೋ ಕೇಂದ್ರಗಳು ಮತ್ತು ಚಾನೆಲ್‌ಗಳ ಸ್ಥಾಪನೆಗೆ ಒತ್ತಾಯಿಸಿದರು.

ಸಚಿವರ ಭೇಟಿ ಬಳಿಕ ಮಾತನಾಡಿದ ಈರಣ್ಣ ಕಡಾಡಿ, ನನ್ನ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಮತ್ತು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದರು.

Home add -Advt


Related Articles

Back to top button