ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಮಾಜ ಸೇವೆ ಜೀವನದ ಉಸಿರಾಗಬೇಕು ಎಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಡಾ. ಸಿ ಸೋಮಶೇಖರ ಅಭಿಮತ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಶ್ರಮದಾನವಾದಾಗ ಮಾತ್ರ ವ್ಯಕ್ತಿಯನ್ನು ಗುರುತಿಸಿ ಗೌರವಿಸುವ ಕಾರ್ಯ ಎಲ್ಲೆಡೆಗೂ ನಡೆಯುತ್ತದೆ ಎಂದು ಹೇಳಿದರು.
ನಗರದ ಮಹಂತಿಮಠದ ಸರಳ ವೇದಿಕೆಯಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಪ್ರತಿಷ್ಠಿತ ಗಡಿನಾಡ ಚೇತನ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಪ್ರಶಸ್ತಿಗಳು ಮನುಷ್ಯನ ಮೌಲ್ಯವನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತವೆ. ಸಾಧನೆ ಸಿದ್ಧಿಸಿದಾಗ ದೊರೆಯುವಂತ ಸನ್ಮಾನಗಳು ಮೌಲ್ಯ ಯುತವಾದುದು. ನನಗೆ ಸರಕಾರ ನೀಡಿರುವ ಈ ಪ್ರಾಧಿಕಾರದ ಹುದ್ದೆಗೆ ಮೌಲ್ಯಯುತವಾದಂತ ನ್ಯಾಯವನ್ನು ಒದಗಿಸುವ ಪ್ರಾಮಾಣಿಕ ಕೆಲಸವನ್ನು ಮಾಡುತ್ತೇನೆ. ಗಡಿಭಾಗದಲ್ಲಿ ಹುಕ್ಕೇರಿ ಹಿರೇಮಠ ಮಾಡತ್ತಿರುವ ಕಾಯಕಸೇವೆ ಅಪರೂಪವಾದುದು ಎಂದರು.
ಸಾನಿಧ್ಯ ವಹಿಸಿದ್ದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ಪ್ರತಿಯೊಬ್ಬ ಪ್ರಜೆಯೂ ದೇಶ ನನಗೇನು ಕೊಟ್ಟಿತು ಎನ್ನುವ ಬದಲು ದೇಶಕ್ಕಾಗಿ ನಾನೇನು ಕೊಟ್ಟೆ ಎನ್ನುವುದನ್ನು ಸ್ಮರಿಸಿಕೊಂಡಾಗ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಸಂಸ್ಥೆ ಅಥವಾ ಕುಟುಂಬದಿಂದ ಪಡೆದ ಉತ್ತಮ ಸಂಸ್ಕಾರ, ಸಂಸ್ಕೃತಿಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಬೆಳವಣಿಗೆ ಸಾಧ್ಯ ಡಾ. ಸಿ ಸೋಮಶೇಖರ ಅವರು ಈ ಪ್ರಶಸ್ತಿಗೆ ನಿಜಕ್ಕೂ ಅರ್ಹರು. ಅವರಿಂದ ಗಡಿಭಾಗದಲ್ಲಿ ಹೆಚ್ಚು ಹೆಚ್ಚು ಕೆಲಸವಾಗಲಿ ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಮಹಂತಿನ ಮಠದ ಆಡಳಿತಾಧಿಕಾರಿ ವೀರಭದ್ರಯ್ಯ, ವೇದ ಪ್ರಾಧ್ಯಾಪಕರಾದ ಹೊನ್ನಪ್ಪಾಜಿ, ಮಹಾದೇವ ಬಿರಾದಾರ, ಮಹೇಶಬಾಬು ಸೇರಿದಂತೆ ಪಾಠಶಾಲೆಯ ಮಕ್ಕಳಿಂದ ಪ್ರಾರ್ಥಣೆ, ವೇಧಘೋಶ ಜರುಗಿತು.
ಹೆಚ್ಚಿದ ಕೊರೊನಾ ಸೋಂಕು; ಮಹತ್ವದ ಸಭೆ ಕರೆದ ಸಿಎಂ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ