Belagavi NewsBelgaum NewsKarnataka News

*ಘಟಪ್ರಭಾ ಪ್ರವಾಹ; ಮೆಳವಂಕಿ ಗ್ರಾಮ ಸಂಪೂರ್ಣ ಮುಳುಗಡೆ; 800 ಮನೆಗಳು ಜಾಲವೃತ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ 7 ನದಿಗಳು ಅಬ್ಬರಿಸಿ ಹರಿಯುತ್ತಿದ್ದು, ಜಿಲ್ಲೆಯಲ್ಲಿ ಪ್ರವಾಹವುಂಟಾಗಿದೆ. ಗ್ರಾಮಗಳಿಗೆ, ಗ್ರಾಮಗಳೇ ಮುಳುಗಡೆಯಾಗಿದ್ದು, ಕುಟುಂಬಗಳು ಬೀದಿಪಾಲಾಗಿವೆ.

ಘಟಪ್ರಭಾ ನದಿ ಪ್ರವಾಹಕ್ಕೆ ಗೋಕಾಕ್ ತಾಲೂಕಿನಲ್ಲಿ ಹಲವು ಗ್ರಾಮಗಳು ಜಲಾಘಾತಕ್ಕೆ ಸಿಲುಕಿದ್ದು, ಮೆಳವಂಕಿ ಗ್ರಾಮ ಸಂಪೂರ್ಣ ಮುಳುಗಡೆಯಾಗಿದೆ. 800 ಮನೆಗಳು ಜಲಾವೃತಗೊಂಡಿದ್ದು, ಜನ ಜೀವನ ಮೂರಾಬಟ್ಟೆಯಾಗಿದೆ.

ಮೆಳವಂಕಿ ಗ್ರಾಮದಲ್ಲಿ ಮನೆಗಳ ಅರ್ಧದಷ್ಟು ಭಾಗ ನೀರಿನಲ್ಲಿ ಮುಳುಗಿದ್ದು, ರಸ್ತೆಗಳಲ್ಲಿ ಎದೆವರೆಗೆ ನೀರು ನಿಂತಿದೆ. 2019,2021ರಲ್ಲಿಯೂ ಘಟಪ್ರಭಾ ಪ್ರವಾಹಕ್ಕೆ ಮೆಳವಂಕಿ ಗ್ರಾಮ ಮುಳುಗಡೆಯಾಗಿ ನಡುಗಡ್ಡೆಯಂತಾಗಿತ್ತು. ಇದೀಗ ಮತ್ತೆ ಇದೇ ಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಗಳಲ್ಲಿನ ಕಟ್ಟಡ, ಮನೆಗಳು, ದೇವಸ್ಥಾನಗಳು, ಕೃಷಿ ಭೂಮಿ, ರಸ್ತೆ, ಸೇತುವೆಗಳು ಘಟಪ್ರಭಾ ನದಿ ತನ್ನೊಡಲಿಗೆ ಹಾಕಿಕೊಂಡಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button