ಪ್ರಗತಿವಾಹಿನಿ ಸುದ್ದಿ; ಗೋಕಾಕ್: ಬೆಳಗಾವಿಯ ಲೋಕವಾರ್ತೆ ದಿನಪತ್ರಿಕೆ ಸಂಪಾದಕ ಹೀರೋಜಿ ಮಾವರಕರ ಅವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಗೋಕಾಕ ನಗರದಲ್ಲಿ ನಡೆದಿದೆ.
ಈ ಬಗ್ಗೆ ಹೀರೋಜಿ ಅವರ ಸಹೋದರ ಲೋಕ ಕ್ರಾಂತಿ ದಿನಪತ್ರಿಕೆ ಸಂಪಾದಕ ಶ್ರೀನಿವಾಸ್ ಮಾವರಕರ್ ಮಾಹಿತಿ ನೀಡಿದ್ದು, ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗೋಕಾಕದ ಅವರ ಮನೆಯ ಪಕ್ಕದ ನಿವೇಶನದ ಸಂಬಂಧ ಜಗಳ ಆರಂಭವಾಗಿ ಹೀರೋಜಿ ಅವರ ಮೇಲೆ ಹಲ್ಲೆ ನಡೆದಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ . ಗಂಭೀರವಾಗಿ ಗಾಯಗೊಂಡಿರುವ ಅವರನ್ನು ರಾತ್ರಿ ಬೀಟ್ ನಲ್ಲಿದ್ದ ಪೋಲಿಸರು ಗೋಕಾಕದ ಉಮ್ರಾಣಿ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ್ದಾರೆ ಎಂದು ತಿಳಿಸಿದ್ದಾರೆ .
ಹಲ್ಲೆಗೊಳಗಾದವರಿಗೆ ಸೂಕ್ತ ರಕ್ಷಣೆ ಕೊಡಬೇಕು. ಸಂಪಾದಕರ ಕುಟುಂಬದವರಿಗೆ ರಕ್ಷಣೆ ನೀಡಿ ಮುಂದೆ ಹೆಚ್ಚಿನ ಅನಾಹುತ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಿನಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿನಂತಿಸಿದೆ.
ಬೆಳಗಾವಿ: ದೈಹಿಕ ಶಿಕ್ಷಕನಿಂದಲೇ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ