GIT add 2024-1
Raju Karadi Add
Beereshwara 33

*ಹಿಂಡಲಗಾ ಜೈಲಿನಲ್ಲಿ ವಿಡಿಯೋ ಕೇಸ್; ಇಬ್ಬರು ಸಿಬ್ಬಂದಿಗಳು ಸಸ್ಪೆಂಡ್; ಜೈಲರ್ ವಿರುದ್ಧವೂ ತನಿಖೆ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ಎರಡನೇ ದೊಡ್ಡ ಕಾರಾಗೃಹ ಎಂದು ಖ್ಯಾತಿ ಪಡೆದಿರುವ ಹಿಂಡಲಗಾ ಕಾರಾಗೃಹದಲ್ಲಿ ಕೈದಿಗಳಿಗೆ ನೀಡುತ್ತಿದ್ದ ಕಿರುಕುಳ ಪ್ರಕರಣವನ್ನು ಸೆಲ್ಪಿ ವಿಡಿಯೋ ಮಾಡಿ ಜೈಲಿನಲ್ಲಿ ನೀಡುತ್ತಿದ್ದ ಕಿರುಕುಳ ಹೇಳಿಕೊಂಡ ಪ್ರಕರಣ ಕುರಿತಂತೆ ಇಬ್ಬರು ಸಿಬ್ಬಂದಿಗಳನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.

ಜೈಲಿನಲ್ಲಿ ಹೆಡ್ ವಾರ್ಡರ್ ಬಿ.ಎಲ್ ಮೇಳವಂಕಿ ಮತ್ತು ವಾರ್ಡರ್ ವಿ.ಟಿ ವಾಗಮೋರೆ ಇಬ್ಬರನ್ನೂ ಅಮಾನತು ಮಾಡಿ ಉತ್ತರ ವಲಯ ಕಾರಾಗೃಹದ ಉಪ ಮಹಾನೀರಿಕ್ಷಕ ಟಿ.ಪಿ.ಶೇಷ ಆದೇಶ ಮಾಡಿದ್ದಾರೆ. ಅಲ್ಲದೆ, ಹಿಂಡಲಗಾ ಕಾರಾಗೃಹದ ಕೆಲವು ಸಿಬ್ಬಂದಿ ಹಾಗೂ ಜೈಲರ್ ಇವರ ಮೇಲೆಯೂ ತನಿಖೆ ಮುಂದುವರೆಸಿದ್ದಾರೆ.

Emergency Service

ಜೈಲಿನಲ್ಲಿ ಕೈದಿಗಳಿಗೆ ಸಿಬ್ಬಂದಿಗಳಿಗೆ ಕಿರುಕುಳ, ಹಣ ಪಡೆದು ಕೈದಿಗಳಿಗೆ ಮೊಬೈಲ್ ನೀಡುತ್ತಿದ್ದಾರೆ. ಮತ್ತು ಇಬ್ಬರು ಕೈದಿಗಳ ನಡುವೆ ಗಲಾಟೆ ನಡೆದು ಕೊಲೆಗೆ ಯತ್ನಿಸಿದ್ದು ಸೇರಿದಂತೆ ಕೈದಿಯೊರ್ವ ಸೆಲ್ಲಿ ವಿಡಿಯೋದಲ್ಲಿ ಆರೋಪ ಮಾಡಿದ್ದ. ಕೂಡಲೇ ಎಚ್ಚೆತ್ತುಕೊಂಡಿದ್ದ ಬಂಧಿಖಾನೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಹಿಂಡಲಗಾ ಜೈಲು ಅಧೀಕ್ಷಕ ಕೃಷ್ಣಕುಮಾರ್ ಗೆ ಕರೆ ಮಾಡಿ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು.

ಹಿಂಡಲಗಾ ಕಾರಾಗೃಹದಲ್ಲಿ ನಡೆದ ಘಟನೆಗಳ ಬಗ್ಗೆ ಮಾಹಿತಿ ಪಡೆದಿದ್ದರು. ಕಾರಾಗೃಹ ಉಪಮಹಾನಿರೀಕ್ಷಕರು ಉತ್ತರ ವಲಯ ಅಧಿಕಾರಿ ಅವರಿಗೆ ತನಿಖೆ ನಡೆಸಿ ವರದಿ ನೀಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದರು.

ಎಡಿಜಿಪಿ ಸೂಚನೆ ಮೇರೆಗೆ ಪ್ರಾಥಮಿಕವಾಗಿ ತನಿಖೆ ನಡೆಸಿದ್ದ ಟಿ.ಪಿ ಶೇಷ ಕೈದಿಗಳ ಗಲಾಟೆ ವೇಳೆಯಲ್ಲಿ ಹೆಡ್ ವಾರ್ಡರ್ ಆಗಿದ್ದ ಬಿ.ಎಲ್ ಮೇಳವಂಕಿ ಮತ್ತು ವಾರ್ಡರ್ ವಿ.ಟಿ ವಾಗಮೋರೆ ನಿರ್ಲಕ್ಷ್ಯ ತೋರಿರುವುದು ಕಂಡು ಬಂದಿದೆ. ಈ‌ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Laxmi Tai add
Bottom Add3
Bottom Ad 2