Kannada NewsLatest

ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ

ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಚಿಕ್ಕೋಡಿ ತಾಲೂಕಿನ ಹಿರೇಕೂಡಿ ಗ್ರಾಮದಲ್ಲಿ ಜೊಲ್ಲೆ ಉದ್ಯೋಗ ಸಮೂಹ ಸಂಸ್ಥೆಯ ವತಿಯಿಂದ ಶುದ್ಧ ಕುಡಿಯುವ ನೀರು ಘಟಕ ನಿರ್ಮಾಣ ಕಾಮಗಾರಿಗೆ ಬೀರೇಶ್ವರ ಸೋಸಾಯಟಿಯ ನಿರ್ದೇಶಕರಾದ ಅಪ್ಪಾಸಾಹೇಬ ಜೊಲ್ಲೆ, ಜ್ಯೋತಿ ಸಂಸ್ಥೆಯ ಅಧ್ಯಕ್ಷರಾದ ಚಂದ್ರಕಾಂತ ಖೋತ, ಭೂಮಿಪೂಜೆ ನೆರವೇರಿಸಿದರು.

ಅಪ್ಪಾಸಾಹೇಬ ಜೊಲ್ಲೆ ಮಾತನಾಡಿ ಸದೃಢ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಅತೀ ಅವಶ್ಯಕ. ಹೀಗಾಗಿ ಶೀಘ್ರದಲ್ಲಿ ಉತ್ತಮ ಗುಣಮಟ್ಟದ ಕಾಮಗಾರಿ ನಡೆಸಿ, ಜನರಿಗೆ ಅನುಕೂಲ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಂ.ಪಂ. ಅಧ್ಯಕ್ಷರಾದ ಬಾಬರ ಪಟೇಲ, ಉಪಾಧ್ಯಕ್ಷರಾದ ಅನೀತಾ ದೇವಡಕರ, ಸುಭಾಷ ಚೌಗಲೆ, ಸುದರ್ಶನ ಚೌಗಲೆ, ಅನ್ವರ ದಾಡಿವಾಲೆ, ರೇವಯ್ಯಾ ಹೀರೆಮಠ, ಬಸವಂತ ಕರೋಶಿ, ಅಶೋಕ ಪೂಜಾರಿ, ಸದಾಶೀವ ಕೋಕಣೆ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button