
ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿರುವ ಘಟನೆ ಬೆಳಗಾವಿ ನಗರದ ಕೃಷ್ಣ ದೇವರಾಯ ಸರ್ಕಲ್ ಬಳಿಯ ಹೋಟೆಲ್ ನಲ್ಲಿ ನಡೆದಿದೆ.
ಮಧ್ಯಾಹ್ನ ಊಟದ ವೇಳೆ ಪರಸ್ಪರ ಕಾಲು ತಾಗಿದ್ದಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ಆರಂಭವಾಗಿದ್ದು, ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಹೋಟೆಲ್ ನಲ್ಲಿ ಕೆಲ ಕಾಲ ರಣಾಂಗಣವೇ ನಡೆದಿದೆ. ಗಲಾಟೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮಾಳಮಾರುತಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.