ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೈಸೂರು ಎಂದರೆ ಇಡೀ ವಿಶ್ವವೆ ನೋಡುವಂತಹ ವಿಶ್ವವಿಖ್ಯಾತ ದಸರಾ ಅದೆ ನಿಟ್ಟಿನಲ್ಲಿ ಉತ್ತರ ಕರ್ನಾಟಕದಲ್ಲಿ ಮೈಸೂರಿನ ನಂತರ ವೈಶಿಷ್ಟ ಪೂರ್ಣವಾದ ದಸರಾ ನಡೆಯುವುದು ಹುಕ್ಕೇರಿ ನಗರದ ಹಿರೇಮಠದಲ್ಲಿ ಈ ಕಾರ್ಯಕ್ರಮದಲ್ಲಿ ಮೈಸೂರು ಅರಮನೆ ಜಪದಕಟ್ಟೆ ಮಠದ ಷಟಸ್ಥಲ ಬ್ರಹ್ಮಿ ಡಾ.ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರು ಭಾಗವಹಿಸಿದ್ದರು.
ಹುಕ್ಕೇರಿ ಹಿರೇಮಠದ ದಸರಾ ಗೌರವವನ್ನು ಸ್ವಿಕರಿಸಿ ಮಾತನಾಡಿದ ಅವರು, ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನಿಧ್ಯದಲ್ಲಿ ನಡೆಯುವ ಹುಕ್ಕೇರಿ ಹಿರೇಮಠದ ದಸರಾ ಇಡಿ ವಿಶ್ವವೆ ನೋಡುವಂತದ್ದಾಗಿದೆ. ಬಾಬಾ ರಾಮದೇವರಂತವರು ದಸರಾ ಉತ್ಸವದಲ್ಲಿ ಪಾಲ್ಗೊಂಡು ಸಂತಸ ಪಟ್ಟಿದ್ದಾರೆ ಎಂದರು. ನಾವು ಮೈಸೂರಿನಿಂದ ಇಲ್ಲಿಗೆ ಬಂದು ದಸರಾ ಉತ್ಸವದಲ್ಲಿ ಭಾಗವಹಿಸಿದ್ದೇವೆ. ದಸರಾ ಉತ್ಸವದ ಉಪಯೋಗವನ್ನು ಜನ ಪಡೆದುಕೊಳ್ಳಬೇಕು ಎಂದರು ,
ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದುಳಪ್ಪಾ ಹೋಸಮನಿಯವರು ಶ್ರೀ ಮಠದ ಗೌರವವನ್ನು ಸ್ವಿಕರಿಸಿ ಮಾತನಾಡುತ್ತಾ ಹುಕ್ಕೇರಿ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹುಕ್ಕೇರಿಯಲ್ಲಿ ಅಷ್ಟೇ ಅಲ್ಲ ಬೆಳಗಾವಿ ನಗರದಲ್ಲಿ ಕೂಡಾ ಜನ ಮಾನಸವನ್ನು ಗೆದ್ದಿದ್ದಾರೆ, ಇವರ ಆಶಿರ್ವಾದವನ್ನು ಪಡೆದುಕೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಜನ ಬರುತ್ತಿರುವುದು ಅಭಿಮಾನದ ಸಂಗತಿ ಎಂದರು.
ಗೋಕಾಕ ನಗರದ ಖ್ಯಾತ ಚಿಕ್ಕ ಮಕ್ಕಳ ತಜ್ಞ ಡಾ ವಿರಣ್ಣ ಚಿಕ್ಕೋಡಿಯವರು ಭಾಗವಹಿಸಿದ್ದರು . ಷ ಬ್ರ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೂಲಿಮಠ ಸವದತ್ತಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಒಂಬತ್ತು ದಿನ ಜರುಗಿದ ನವಚಂಡಿಕಾ ಯಾಗ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ