ಪ್ರಗತಿವಾಹಿನಿ ಸುದ್ದಿ; ಹುಕ್ಕೇರಿ: ಅಕ್ಟೋಬರ 7 ರಿಂದ ನಡೆದ ದಸರಾ ನಿಮಿತ್ಯ ನವ ಚಂಡಿಕಾ ಹೋಮ ಇವತ್ತು ಸಂಪನ್ನಗೊಂಡಿತು. ಕರ್ನಾಟಕ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ ಅವರು ಹುಕ್ಕೇರಿ ಹಿರೇಮಠದ ಪ್ರಾಂಗಣದಲ್ಲಿ ಜರುಗಿದ ನವ ಚಂಡಿಕಾ ಯಾಗಕ್ಕೆ ಪೂರ್ಣಾಹುತಿ ನೀಡಿ ಮಾತನಾಡುತ್ತಾ ದಸರಾ ಹಬ್ಬ ಹಿಂದೂಗಳಿಗೆ ಪವಿತ್ರವಾದ ಹಬ್ಬ ಈ ಹಬ್ಬದಲ್ಲಿ ಎಲ್ಲರೂ ಕೂಡ ದೇವಿಯನ್ನು ಆರಾಧಿಸುತ್ತೇವೆ ಇವತ್ತು ಕರ್ನಾಟಕ ಸರಕಾರ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆ ಸಲ್ಲಿಸುವುದರ ಮುಖಾಂತರ ಕರೋನಾ ಮೂರನೇ ಅಲೆ ಬಾರದೆ ಇರಲಿ. ಮಕ್ಕಳ ಆರೋಗ್ಯ ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತಿದೆ ಎಂದರು.
ಇಂದು ವಿಶೇಷವಾದ ನವ ಚಂಡಿಕಾ ಹೋಮವನ್ನು ನೆರವೇರಿಸಿ ಪೂರ್ಣಾಹುತಿಯನ್ನು ಅರ್ಪಿಸಿದ್ದೇನೆ, ಇದಕ್ಕೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳವರು ಆಶೀರ್ವದಿಸುವ ಮುಖಾಂತರ ನಮಗೆಲ್ಲ ಸ್ಫೂರ್ತಿ ತುಂಬಿರುವುದು ಅಭಿಮಾನದ ಸಂಗತಿ ಎಂದರು.
ವಿಜಯದಶಮಿಯ 9 ದಿನಗಳ ಪೂಜೆಯನ್ನು ನೆರವೇರಿಸಿದ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಮಾತನಾಡುತ್ತಾ ಇವತ್ತು ಸರಕಾರ ಮುಜರಾಯಿ ಇಲಾಖೆಯಿಂದ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷವಾದ ಪೂಜೆ ಸಲ್ಲಿಸಿದೆ. ಸಚಿವರಾದ ಉಮೇಶ್ ಕತ್ತಿಯವರ ಗೋವಿಂದ ಕಾರಜೋಳ ಅವರ ಮತ್ತು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿರ್ದೇಶನದಂತೆ ಮಹಂತೇಶ್ ಕವಟಗಿಮಠ ಪೂರ್ಣಾಹುತಿಯನ್ನು ನೆರವೇರಿಸಿ ಎಲ್ಲಾ ಮಕ್ಕಳಿಗೂ ಕೂಡ ಒಳಿತನ್ನು ಬಯಸಿರುವುದು ನಮಗೆ ಅತೀವ ಸಂತೋಷವನ್ನು ತಂದಿದೆ ಎಂದರು.
ಆಸ್ಥಾನ ವಿದ್ವಾಂಸ ಸಂಪತ್ಕುಮಾರ್ ಶಾಸ್ತ್ರಿಗಳು ಮತ್ತು 108 ಜನ ವೇದವಟುಗಳ ವೇದಪಠಣದೊಂದಿಗೆ ನವ ಚಂಡಿಕಾ ಯಾಗ ನೆರವೇರಿಸಲಾಯಿತು.
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ ನಮ್ಮೂರಲ್ಲಿ ಇದೊಂದು ಪವಿತ್ರ ಕಾರ್ಯ ಗುರುಗಳು ಮಾಡುತ್ತಿದ್ದಾರೆ ಎಂದರು.
ಬೆಳಗಾವಿಯ ಜಂಗಮ ಸಮಾಜದ ಮುಖಂಡರಾದ ಸೋಮಶೇಖರ ಹಿರೇಮಠ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ರಂಗಾಯಣದ ನಿರ್ದೇಶಕ ರಮೇಶ ಪರವಿನಾಯಕ ಶ್ರೀ ಗಳ ಪಾದಪೂಜೆಯನ್ನು ನೆರವೆರಿಸಿದರು.
ಚಾಮುಂಡಿ ಉತ್ಸವ ಮೂರ್ತಿ ಮೆರವಣಿಗೆ ಆರಂಭ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ