
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಹುಕ್ಕೇರಿ ಹಿರೇಮಠದ ಕೀರ್ತಿ ಹಾಲು ಉಕ್ಕೇರಿದಂತೆ ಉಕ್ಕುತ್ತದೆ. ಹುಕ್ಕೇರಿ ಹಿರೇಮಠ ಇವತ್ತು ಎಲ್ಲರನ್ನೂ ತನ್ನ ತೋಳ್ತೆಕ್ಕೆಯಲ್ಲಿ ತೆಗೆದುಕೊಂಡು ಹೋಗುತ್ತಾ, ಸಮಾಜಮುಖಿ ಕಾರ್ಯವನ್ನು ಮಾಡುತ್ತಿದೆ. ಇಲ್ಲಿ ಆಚಾರ-ವಿಚಾರ ಸಂಸ್ಕ್ರತಿ ಎಲ್ಲವು ಕೂಡ ತಲೆಯೆತ್ತಿ ನಿಂತಿದೆ. ಎಲ್ಲರು ಇಲ್ಲಿ ಸಮದೃಷ್ಟಿಯಿಂದ ಭಾಗುತ್ತಿರುವುದನ್ನು ನೋಡಿದರೆ ಹಾಲು ಉಕ್ಕೇರಿದಂತೆ ಶ್ರೀಮಠದ ಕೀರ್ತಿ ಉಕ್ಕೇರುವುದರಲ್ಲಿ ಎರಡು ಮಾತಿಲ್ಲ ಎಂದು ನೊಣವಿನಕೆರೆ ಕ್ಷೇತ್ರದ ಅಧಿಪತಿಗಳಾದ ಶ್ರೀ ಮ ಪ್ರ ಡಾ. ಕರಿಬಸವ ವೃಷಭೇಂದ್ರ ಶಿವಯೋಗೀಶ್ವರ ಮಹಾಸ್ವಾಮಿಗಳು ನಗರದ ಲಕ್ಷ್ಮಿಟೇಕಡಿಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖಾ ಮಠಕ್ಕೆ ಭೇಟಿಯಾಗಿ ಶ್ರೀಮಠದ ಗೌರವವನ್ನು ಸ್ವೀಕರಿಸಿ ಮಾತನಾಡಿದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ನೊನವಿನಕೆರೆ ಅಜ್ಜಯ್ಯ ನವರು ಬೆಳಗಾವಿ ಜಿಲ್ಲೆಗೆ ಬಂದಿರುವುದು ನಿಜಕ್ಕೂ ಕೂಡ ಸಂತೋಷದ ಸಂಗತಿ. ಮಹಾ ತಪಸ್ವಿಗಳು ಪಾದವಿಟ್ಟ ಸ್ಥಳ ಇನ್ನೂ ಹೆಚ್ಚು ಹೆಚ್ಚು ಬೆಳೆಯುವುದರಲ್ಲಿ ಸಂಶಯವಿಲ್ಲ. ಅವರ ಆಶೀರ್ವಾದ ನಮ್ಮ ಭಾಗಕ್ಕೆ ಸದಾ ಇರಲಿ ಎಂದು ಮಾತನಾಡಿದರು.
ಮಠಾಧ್ಯಕ್ಷ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ರಂಭಾಪುರಿ ಮಹಾತಪಸ್ವಿ ಲಿಂ. ಜಗದ್ಗುರು ವೀರಗಂಗಾಧರ ಭಗವತ್ಪಾದರ ಸೇವೆಯನ್ನು 18 ವರ್ಷ ಸತತವಾಗಿ ಮಾಡಿರುವ ಪೂಜ್ಯರು ಇವತ್ತು ಇಡೀ ದೇಶದಲ್ಲಿ ತಮ್ಮ ತಪಃ ಶಕ್ತಿಯಿಂದ ಹೆಸರಾಗಿದ್ದಾರೆ. ಎಲ್ಲಾ ಶಕ್ತಿಗಿಂತ ತಪಃ ಶಕ್ತಿ ತುಂಬಾ ದೊಡ್ಡದು. ಪರಮಪೂಜ್ಯರಿಗೆ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿರುವುದು ನಿಜಕ್ಕೂ ಕೂಡ ಅಭಿಮಾನದ ಸಂಗತಿ ಎಂದರು.
ಇದೇ ಸಂದರ್ಭದಲ್ಲಿ ನಗರದ ಅನೇಕ ಸದ್ಭಕ್ತರು ಉಪಸ್ಥಿತರಿದ್ದರು. ಡಾ. ಶಿವರಾಮ್, ವಿಜಯ್ ಶಾಸ್ತ್ರೀ, ಅರವಿಂದ್ ಜೋಶಿ, ವೀರುಪಾಕ್ಷಯ್ಯ ನೀರಲಗಿಮಠ, ಚಂದ್ರಶೇಖರಯ್ಯ ಸಾಲಿಮಠ ಸೌಡಿ, ಸೋಮಶೇಖರ್ ಹಿರೇಮಠ ಹಾಗೂ ಚನ್ನರಾಜ ಹಟ್ಟಿಹೊಳಿ, ಮೃಣಾಲ ಹೆಬ್ಬಾಳ್ಕರ್, ಮಾಜಿ ಬುಡಾ ಅಧ್ಯಕ್ಷ ಯುವರಾಜ ಕದಂ ಇನ್ನೂ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ