Kannada NewsLatest

ಹೀಗೂ ಮಾಡಬಹುದು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀಗಳು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಮಾರಂಭ ನಡೆಸಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಿದರು.

ಹೆಣ್ಣು ಮಕ್ಕಳು ಇಡೀ ಸಮುದಾಯದ ಒಳಿತಿಗಾಗಿ ಕ್ರಮ ವಹಿಸಿರುತ್ತಾರೆ. ಅವರನ್ನು ಗೌರವಿಸಿ ಅವರ ಸಾಧನೆಯನ್ನು ಕೊಂಡಾಡುವುದು ಅತಿಮುಖ್ಯ. ಅದರೊಂದಿಗೆ ನಾವು ನಮ್ಮ ನಮ್ಮ ಪರಿಸರದಲ್ಲಿ ನಮ್ಮ ಮನೆ ಕೆಲಸ ಮಾಡುವ ಕಸ ಹೊಡೆಯುವ ಮುಸುರೆ ತಿಕ್ಕುವ ಮತ್ತು ನಮ್ಮಲ್ಲಿ ತಮ್ಮ ಶ್ರಮ ಶಕ್ತಿಯಿಂದ ನಮ್ಮ ಮನೆಯನ್ನು ಸ್ವಚ್ಛವಾಗಿರುವ ಮಹಿಳೆಯರನ್ನು ಗೌರವಿಸುವುದು ಕೂಡ ಉತ್ತಮ ಎನ್ನುವುದು ನಮ್ಮ ಭಾವನೆ ಎಂದು ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ನಾವು ಇಂತಹ ಮಹಿಳೆಯರನ್ನು ಗೌರವಿಸುವುದು ಅತಿ ಮುಖ್ಯವಾಗಿದೆ. ಅಂತೆಯೇ ಬೆಳಗಾವಿ ಹುಕ್ಕೇರಿ ಹಿರೇಮಠ ಸಂಸ್ಕೃತಿಕರಣದ ಮಹಿಳೆಯರನ್ನು ಗೌರವಿಸಿ ಅವರಿಗೆ ಸಹಾಯ ಹಸ್ತ ಚಾಚುವ ಕೆಲಸ ಮಾಡಿದೆ ಎಂದರು.

ಅವರು ನಗರದ ಲಕ್ಷ್ಮಿ ಟಿಕಡಿ ಯಲ್ಲಿರುವ ಬೆಳಗಾವಿ ಹುಕ್ಕೇರಿ ಹಿರೇಮಠದಲ್ಲಿ 40ನೆಯ ಸುವಿಚಾರ ಚಿಂತನ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಾನಿಧ್ಯ ವಹಿಸಿ ಮಾತನಾಡಿದರು.

ನಿಮ್ಮ ನಿಮ್ಮ ಮನೆಯಲ್ಲಿರುವ ಹೆಣ್ಣುಮಕ್ಕಳಿಗೆ ಗೌರವಿಸಿ ಮನೆಯ ಕೆಲಸ ಮಾಡುವ ಹೆಣ್ಣು ಮಕ್ಕಳಿಗೆ ಸಹಾಯ ಹಸ್ತವನ್ನು ಚಾಚಿ ಎಂದು ಶ್ರೀಗಳು ಸ್ವತಹ ತಮ್ಮ ಶ್ರೀಮಠದಿಂದ ಈ ಕಾರ್ಯವನ್ನು ಆರಂಭಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಆಯುರ್ವೇದ ವೈದ್ಯರು ಸುಷ್ಮಾ ಮೇಳದವರು ಉಪನ್ಯಾಸ ನೀಡಿ ಆಹಾರವನ್ನು ಔಷಧಿ ರೂಪದಲ್ಲಿ ತೆಗೆದುಕೊಳ್ಳಿ. ಏಕೆಂದರೆ ಆಹಾರ ಔಷಧಿ ಆಗಬೇಕು. ಆಹಾರದಿಂದ ನಮ್ಮಲ್ಲಿ ಒಳ್ಳೆಯ ವಿಚಾರಗಳು ಬರುತ್ತವೆ. ಅದಕ್ಕಾಗಿ ಆಹಾರ ಸಂಸ್ಕೃತಿ ಕೂಡ. ಅತಿಮುಖ್ಯ ಆರೋಗ್ಯಪೂರ್ಣ ಆಹಾರವನ್ನು ಸ್ವೀಕರಿಸುವ ನಮ್ಮ ಮನೆಯಲ್ಲಿ ಆಯುರ್ವೇದದ ಕೇಂದ್ರವನ್ನಾಗಿ ಮಾಡಿಕೊಳ್ಳೋಣ ಎಂದು ತಿಳಿಸಿದರು.

ವ್ಯಾಯಾಮ ಆರೋಗ್ಯಕ್ಕೆ ಪೂರಕವಾಗಿ ನಿಲ್ಲುತ್ತದೆ. ಇದನ್ನು ಅರ್ಥೈಸಿಕೊಂಡು ನಡೆಯುವುದು ಅತಿ ಅವಶ್ಯವಿದೆ ಎಂದು ಸದಾನಂದ ಮಾಳ ಶೆಟ್ಟಿ  ಉಪನ್ಯಾಸ ನೀಡಿದರು. ನಿವೃತ್ತ ಪ್ರಾಚಾರ್ಯೆ ಸುಮಂಗಲಾ ಶಿಂತ್ರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳಗಾವಿಯ ವಿಜಯ ಶಾಸ್ತ್ರಿಗಳ 70ನೇ ಹುಟ್ಟುಹಬ್ಬದ ನಿಮಿತ್ಯ ವಿಶೇಷ ಸನ್ಮಾನ ಜರುಗಿತು. ಅಂತರ್ರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಸುಮಾರು ಹದಿನೈದು ಜನ ಮಹಿಳೆಯರಿಗೆ ಬಟ್ಟೆ ಹಾಗೂ ಆಹಾರ ಧಾನ್ಯವನ್ನು ವಿತರಿಸಲಾಯಿತು. ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಧರ್ಮದರ್ಶಿ ಡಾಕ್ಟರ್ ಪಿ ಶಿವರಾಮ್ ಅವರ ಸೇವೆಯಿಂದ ವಿಶೇಷವಾದ ಪ್ರಸಾದ ಸೇವೆ ಜರುಗಿತು.   ಪ್ರತಿಭಾ ಕಳ್ಳಿ ಮಠ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button