

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ವಿಧಾನ ಸಭೆ ಚುನಾವಣೆ ಮುಗಿದ ತಕ್ಷಣ ಬಹುತೇಕ ರಾಜಕಾರಣಿಗಳು ವಿಶ್ರಾಂತಿಗೆ ಶರಣಾಗಿದ್ದರೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಎಂದಿನಂತೆ ತಮ್ಮ ಕೆಲಸದಲ್ಲಿ ಮಗ್ನರಾಗಿದ್ದಾರೆ.
ಗುರುವಾರ ಲಕ್ಷ್ಮೀ ಹೆಬ್ಬಾಳಕರ್ ಅವರು ತಮ್ಮ ಗೃಹ ಕಚೇರಿಯಲ್ಲಿ ಕಾರ್ಯಕರ್ತರ ಆರೋಗ್ಯ, ಚುನಾವಣೆ ಕೆಲಸ, ಮತದಾನದ ಪ್ರಮಾಣಗಳ ಕುರಿತು ತಮ್ಮ ಕಾರ್ಯಕರ್ತರ ಜೊತೆ ಸಮಾಲೋಚನೆ ನಡೆಸಿದರು. ನಂತರ ಬೆಳಗಾವಿ ಮತ್ತು ಹಿರೇಬಾಗೇವಾಡಿಯಲ್ಲಿ ಕಾರ್ಯಕರ್ತರ ಮನೆಯ ಮದುವೆಗಳಲ್ಲಿ ಭಾಗಿಯಾಗಿ ನವ ಜೋಡಿಗಳಿಗೆ ಶುಭ ಕೋರಿದರು.
ಕಳೆದ 5 ವರ್ಷಗಳಿಂದಲೂ ಸದಾ ಕ್ಷೇತ್ರದ ಕೆಲಸದಲ್ಲೇ ತೊಡಗಿಕೊಳ್ಳುವ ಲಕ್ಷ್ಮೀ ಹೆಬ್ಬಾಳಕರ್, ಅನಾರೋಗ್ಯದ ಸಂದರ್ಭ ಹೊರತುಪಡಿಸಿ ವಿಶ್ರಾಂತಿ ಪಡೆಯುವುದೇ ಇಲ್ಲ. ಚುನಾವಣೆ ಮುಗಿದರೂ ಅವರು ವಿಶ್ರಾಂತಿ ಪಡೆಯದೆ ತಮ್ಮ ಎಂದಿನ ಕಾರ್ಯಚಟುವಟಿಕೆ ಮುಂದುವರಿಸಿದರು.