ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕಲ್ಪವೃಕ್ಷ ಮಹಿಳಾ ಸಂಘಟನೆಯ ಉದ್ಘಾಟನೆಯನ್ನು ಸಂಸದೆ ಮಂಗಳಾ ಅಂಗಡಿ ರೂಪಾಲಿ ಕನ್ವೆನ್ಶನ್ ಹಾಲ್ ನಲ್ಲಿ ನೆರವೇರಿಸಿದರು.
ಈ ವೇಳೆ ಮಾತನಾಡಿದ ಮಂಗಳಾ ಅಂಗಡಿ, ಕೇಳಿದ್ದನ್ನು ಕೊಡುವ ಕಲ್ಪವೃಕ್ಷ ವೇದಿಕೆಯಿಂದ ಮಹಿಳೆಯರಿಗೆ ಎಲ್ಲಾ ರೀತಿಯ ಸಹಾಯವಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿ ಉತ್ತರದ ಶಾಸಕ ಅನಿಲ್ ಬೆನಕೆ ಹಾಗೂ ಬೆಳಗಾವಿ ಗ್ರಾಮೀಣ ಮಾಜಿ ಶಾಸಕ ಸಂಜಯ್ ಪಾಟೀಲ್ ಹಾಗೂ ಡಾ.ರವಿ ಪಾಟೀಲ್ ಆಗಮಿಸಿದ್ದರು.
ಈ ವೇಳೆ ಮಾತನಾಡಿದ ಸಂಜಯ ಪಾಟೀಲ್, ಮಹಿಳೆಯರಿಗೆ ಎಲ್ಲಾ ರಂಗಗಳಲ್ಲಿ ಮುಂದೆ ಬರಲು ವೇದಿಕೆಯಾದ ಕಲ್ಪವೃಕ್ಷ ವೇದಿಕೆ ಸ್ಥಾಪಿಸಿದ ಜ್ಯೋತಿ ಶೆಟ್ಟಿಯವರು ಸಮಾಜಸೇವೆಯೊಂದಿಗೆ ಮುಖ್ಯವಾಹಿನಿ ಮಹಿಳೆಯರಿಗೆ ಉತ್ತೇಜನ ನೀಡುತ್ತಿರುವುದು ಹೆಮ್ಮೆಯ ವಿಷಯ. ಇವರಿಗೆ ಎಲ್ಲರೂ ಕೈ ಜೋಡಿಸಿ ಸಂಘಟನೆಯನ್ನು ಬೆಳೆಸಿ ಎಂದು ಹೇಳಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಜ್ಯೋತಿ ಶೆಟ್ಟಿ ಕಲ್ಪವೃಕ್ಷ ಯಾವುದೇ ಜಾತಿ ಭೇದ ಸಮುದಾಯ ರಾಜಕೀಯ ಮತ್ತು ಲಾಭ ಉದ್ದೇಶವಿಲ್ಲದ ಸಂಘಟನೆಯಾಗಿದ್ದು, ಆರ್ಥಿಕವಾಗಿ ಹಿಂದುಳಿದ ಸಮಾಜದ ಹಿಂದುಳಿದ ವರ್ಗಗಳ ಮಹಿಳೆಯರು ಮತ್ತು ಮಕ್ಕಳ ನಡುವೆ ಕಾರ್ಯನಿರ್ವಹಿಸುತ್ತಾ ಆತ್ಮವಿಶ್ವಾಸ ಹೊಂದಿದ ಮಹಿಳೆಯರು ಸಮಾಜದಲ್ಲಿ ಭಾಗವಹಿಸಲು ಮತ್ತು ಪ್ರಭಾವ ಬೀರುವ ದೂರದೃಷ್ಟಿಯನ್ನು ಸಂಘಟನೆ ಇಟ್ಟುಕೊಂಡು ಶಿಕ್ಷಣ ಮತ್ತು ತರಬೇತಿಯ ಮೂಲಕ ವೃತ್ತಿಪರ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು. ಡಾ.ನೀತಾ ದೇಶಪಾಂಡೆ ಮಹಿಳಾ ಸಂಘಟನೆಗಳ ಮಹತ್ವದ ಕುರಿತು ಮಾತನಾಡಿದರು.
ಕಾರ್ಯಕ್ರಮದ ಸ್ವಾಗತವನ್ನು ಅರುಣ ಕಡಬಡಿ ಮತ್ತು ವಂದನಾರ್ಪಣೆಯನ್ನು ಸ್ನೇಹಾ ಸೈಬಣ್ಣವರು ನಡೆಸಿಕೊಟ್ಟರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ಶಾಸ್ತ್ರೀಯ ಭಾಷೆಯಾದ ಕನ್ನಡ ನಾಡಿನ ಹಿರಿಮೆ ವಿಶ್ವವ್ಯಾಪಿಯಾಗಿ ಪಸರಿಸಿದೆ: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ