Belagavi NewsBelgaum NewsKannada NewsKarnataka NewsLatest

*ನಾಡದ್ರೋಹಿ MESಗೆ ಮತ್ತೊಂದು ಶಾಕ್ ಕೊಟ್ಟ ಬೆಳಗಾವಿ ಪಾಲಿಕೆ*

ಪ್ರಗತಿವಾಹಿನಿ ಸುದ್ದಿ: ಕನ್ನಡ ಕಡ್ಡಾಯದ ಜೊತೆಗೆ ನಾಡದ್ರೋಹಿ ಎಂಇಎಸ್ ಗೆ ಬೆಳಗಾವಿ ಮಹಾನಗರ ಪಾಲಿಕೆ ಮತ್ತೊಂದು ಶಾಕ್ ನೀಡಿದೆ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಮಾತ್ರವಲ್ಲ ‘ಬೆಳಗಾವಿ’ ಎಂದು ಬರೆಯಲು ಸೂಚಿಸಿದೆ.

ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡಕ್ಕೆ ಆದ್ಯತೆ ನೀಡಿ ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕವಿರಬೇಕು. ಇದರ ಜೊತೆಗೆ ಬೆಳಗಾವಿ ಅಂತ ಸ್ಪಷ್ಟವಾಗಿ ಬರೆಯಬೇಕು ಎಂದು ತಿಳಿಸಿದೆ.

ಬೆಳಗಾಂವ್, ಬೆಳಗಾಮ್ ಎಂದು ನಮೂದಿಸುವಂತಿಲ್ಲ. ಸ್ಪಷ್ಟವಾಗಿ ಬೆಳಗಾವಿ ಎಂದು ಬರೆಯಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರು ಸೂಚಿಸಿದ್ದಾರೆ. ಈ ಬಗ್ಗೆ ಬೆಳಗಾವಿ ನಗರದ 2000 ಅಂಗಡಿಗಳಿಗೆ ಪಾಲಿಕೆ ನೋಟಿಸ್ ನೀಡಿದ್ದು, ಆದೇಶ ಪಾಲಿಸದಿದ್ದರೆ ಲೈಸನ್ಸ್ ರದ್ದು ಮಾಡುವುದಾಗಿ ಖಡಕ್ ಎಚ್ಚರಿಕೆ ನೀಡಿದೆ.


Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button