Belagavi NewsBelgaum NewsCrimeKannada NewsKarnataka NewsNationalPolitics

*ರಸ್ತೆ ದಾಟುತ್ತಿದ್ದ ಬಾಲಕಿಗೆ ಬೈಕ್ ಡಿಕ್ಕಿ: ಯೋಧನ ಮಗಳು ಸಾವು*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯೋಧನ ಮಗಳಿಗೆ ಬೈಕ್ ಡಿಕ್ಕಿ ಹೋಡೆದ ಪರಿಣಾಮ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. 

ಪ್ರತೀಕ್ಷಾ (6) ಸಾವನ್ನಪ್ಪಿದ್ದ ಬಾಲಕಿ. ಯರಗಟ್ಟಿ ತಾಲೂಕಿನ ಅಕ್ಕಿಸಾಗರ-ಬೆಟಗೇರಿ ರಸ್ತೆ ದಾಟುವಾಗ ಬೈಕ್ ಗುದ್ದಿದ ಪರಿಣಾಮ ಬಾಲಕಿಗೆ ಗಂಭೀರ ಗಾಯವಾಗಿದೆ.‌ ತಕ್ಷಣ ಬಾಲಕಿಗೆ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಬಾಲಕಿ ಸಾವನ್ನಪ್ಪಿದ್ದಾರೆ.‌ 

ಯರಗಟ್ಟಿ ತಾಲೂಕಿನ ಅಕಗಕ್ಕಿ ಸಾಗರ ಗ್ರಾಮದ ಭೂಸೇನೆಯ ಸೈನಿಕ್ ಭೀಮಪ್ಪ ಕಲ್ಲಪ್ಪ ಅವರು ಮಾರ್ಚ್ 29 ರಂದು  ಆರೋಪಿ ಯುವರಾಜ ಮಹಾಂತೇಶ ಗಿಡ್ಡಗೌಡರ ವಿರುದ್ಧ ಮುರಗೋಡ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.

ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಮುರಗೋಡ ಠಾಣೆಯ ಪೊಲೀಸರು ಭೇಟಿ ನೀಡಿ ತನಿಖೆಯನ್ನು ಕೈಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button