Latest

ಕನ್ನಡವನ್ನು ಮರೆತರೆ ತಾಯಿಯನ್ನು ಮರೆತ ಹಾಗೆ : ಅಧ್ಯಕ್ಷೆ ಸುನಂದಎಮ್ಮಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಮಾಯಣ ಮಹಾಭಾರತದಂತ ಪುರಾತನ ಕಾಲದಿಂದಲೂ ಕನ್ನಡ ಇತ್ತು. ಕನ್ನಡವನ್ನು ಮರೆತರೆ ತಾಯಿಯನ್ನು ಮರೆತಾಗೆ. ನಾವು ನೀವು ಒಂದಾಗಿ ಬಾಳಬೇಕಾದರೆ ನಮಗೆ ಬೇಕಾಗಿರುವುದು ಕನ್ನಡ ಅವಶ್ಯಕ ಕನ್ನಡ ಜಾಗೃತಿ ಸಮಿತಿ ಅಧ್ಯಕ್ಷೆ ಸುನಂದಾಎಮ್ಮಿ ಅವರು ಅಭಿಪ್ರಾಯಪಟ್ಟರು.

ಲಿಂಗಾಯತ ಮಹಿಳಾ ಸಮಾಜ, ಕ್ಷೇತ್ರ ಶಿಕ್ಷಣಾಧಿಕಾಗಳ ಕಾರ್ಯಲಯ ಬೆಳಗಾವಿ ಗ್ರಾಮೀಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡಜಾಗೃತಿ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಬೆಳಗಾವಿಯ ಹಿಂಡಲಗಾದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕಕನ್ನಡ ಮತ್ತು ಮರಾಠಿ ಶಾಲೆಯಲ್ಲಿ ಗುರುವಾರ ರಂದು ಹಮ್ಮಿಕೊಂಡ ಕನ್ನಡ ನಾಡುನುಡಿ, ಮಕ್ಕಳ ದಿನಾಚರಣೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ತಾಯಿಯನ್ನು ಯಾವರೀತಿ ನೋಡಿಕೊಳ್ಳುತ್ತವೆ ಅದೇ ರೀತಿ ಕನ್ನಡವನ್ನು ನೊಡಿಕೊಳ್ಳಬೇಕು. ನಾವು ಎಲ್ಲೇ ಇದ್ದರೂ ಕೂಡ ನಮ್ಮ ಕನ್ನಡವನ್ನು ಮರೆಯಬಾರದು. ನಮ್ಮ ತಾಯಿಯನ್ನು ಯಾವರೀತಿ ಪ್ರೀತಿಸುತ್ತೇವೆ ಅದೇರೀತಿ ಕನ್ನಡವನ್ನು ಪ್ರೀತಿಸಬೇಕು. ಕನ್ನಡವನ್ನು ಎಲ್ಲಾ ದೇಶಗಳಲ್ಲಿ ಎದ್ದುಕಾಣುವ ಹಾಗೆಎತ್ತರಕ್ಕೆ ಬೆಳಸಬೇಕು. ಕನ್ನಡ ಅಂದ್ರೆ ನಮ್ಮ ತಾಯಿ ಇದ್ದ ಹಾಗೆ ಯಾವತ್ತು ಮರೆಯಬಾರದು. ಮಕ್ಕಳು ಕನ್ನಡ ಶಾಲೆಯಲ್ಲಿ ಕಲಿಯಿರಿ. ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಿ. ಜೊತೆಗೆ ನಮ್ಮಕನ್ನಡ ನಮ್ಮತಾಯಿಎಂದು ಮರೆಯದಿರಿ, ಕನ್ನಡವನ್ನುಇನ್ನಷ್ಟು ಬೆಳಸೋಣ ಎಂದು ಹೇಳಿದರು.

ಸಾಹಿತಿಜ್ಯೋತಿ ಬದಾಮಿ ಮಾತನಾಡಿ, ಲಿಂಗಾಯತ ಮಹಿಳಾ ಸಮಾಜ, ಕನ್ನಡಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡಜಾಗೃತಿ ಸಮಿತಿ ಇವು ಕನ್ನಡವನ್ನುಕಟ್ಟುವ, ಅಭಿವೃದ್ಧಿ ಮಾಡುವ ಕೆಲಸ ಮಾಡುತ್ತದೆಎಂದರು ಹೇಳಿದರು.

Home add -Advt

ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕಿ, ಗೌರವಾಧ್ಯಕ್ಷೆ ಶೈಲಜಾ ಭಿಂಗೆಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಸುಧಾ ಪಾಟೀಲ್‌ಅವರು ಮಕ್ಕಳಿಗೆ ಬಹುಮಾನ ಪ್ರಾಯೋಜಿಕರು ಹಾಗೂ ಅತಿಥಿಯಾಗಿ ಉಪಸ್ಥಿತರಿದ್ದರು. ಲಿಂಗಾಯತ ಮಹಿಳಾ ಸಮಾಜದಅಧ್ಯಕ್ಷೆ ಶಾಂತಾ ಮಸೂತಿ, ಕಾರ್ಯದರ್ಶಿ ಸಂಗೀತ ಅಕ್ಕಿ, ಗೌರವ ಸದಸ್ಯೆರತ್ನಪ್ರಭ ಬೆಲ್ಲದ, ಜಯಶೀಲಾ ಬ್ಯಾಕೋಡ್, ಹೇಮಾ ಸೋನಳ್ಳಿ, ಕನ್ನಡಜಾಗೃತಿ ಸಮಿತಿ ಸದಸ್ಯ ಶ್ರೀರಂಗ ಜೋಶಿ, ಕ್ಷೇತ್ರ ಶಿಕ್ಷಣ ಸಮನ್ವಅಧಿಕಾರಿಎಮ್.ಎಸ್ ಮೇದಾರ ಸೇರಿದಂತೆ ಲಿಂಗಾಯತ ಸಮಾಜದ ಪದಾಧಿಕಾರಿಗಳು ಹಾಗೂ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ಶಿಕ್ಷಕ ಡಿ.ಜಿ.ಬೆವಿನಕೊಪ್ಪಮಠ ನಿರೂಪಿಸಿದರು. ಶಿಕ್ಷಕ ವೀರೇಶಕರೆರುದ್ರಣ್ಣವರ ಸ್ವಾಗತಿಸಿದರು. ಶಿಕ್ಷಕಿ ಆರ್.ಸಿ. ಕಂಬಾಳಿಮಠ ಅವರು ಪ್ರಾರ್ಥಿಸಿ, ವಂದಿಸಿದರು.

Related Articles

Back to top button