
ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಬೆಳಗಾವಿ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು, ಹಲವೆಡೆ ಅವಘಡಗಳು ಸಂಭವಿಸಿವೆ. ರೈತನೋರ್ವ ಭತ್ತದ ನಾಟಿಗೆ ಸಿದ್ಧತೆ ಮಾಡುತ್ತಿದ್ದ ವೇಳೆ ದುರಂತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಖಾನಾಪುರದಲ್ಲಿ ನಡೆದಿದೆ.
ರೈತ ಪಾಂಡುರಂಗ ಸದೊಬ್ಬಾ ಲಾಡಗಾವ್ಕರ್ (68) ಮೃತ ವ್ಯಕ್ತಿ. ಖಾನಾಪುರದ ತಿವೋಲಿವಾಡಾ ಗ್ರಾಮದಲ್ಲಿ ರೈತ ಪಾಂಡುರಂಗ, ಭತ್ತ ನಾಟಿ ಮಾಡುವ ಸಲುವಾಗಿ ಹೋಲವನ್ನು ಉಳುಮೆ ಮಾಡುತ್ತಿದ್ದ. ಭಾರಿ ಮಳೆಯಿಂದಾಗಿ ಪಾಂಡುರಂಗ ಚಲಾಯಿಸುತ್ತಿದ್ದ ಪಾವ್ ಟೇಲರ್ ಟ್ರ್ಯಾಕ್ಟರ್ ಮುಗುಚಿ ಮೈಮೇಲೆ ಬಿದ್ದಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಖಾನಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಠಾಣೆಯಲ್ಲಿ UDR ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.
ಸುದ್ದಿ ತಿಳಿದ ತಕ್ಷಣವೇ ತಾಲೂಕು ಶಾಸಕರಾದ ಶ್ರೀ ವಿಠ್ಠಲ ಹಲಗೇಕರ್ ಅವರು ಹಾಗೂ ಮಾಜಿ ಶಾಸಕರಾದ ಅರವಿಂದ್ ಪಾಟೀಲ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಂದರ್ಭದಲ್ಲಿ ಸದಾನಂದ ಪಾಟೀಲ್ ಭರಮಾಣ್ಣಿ ಪಾಟೀಲ್ ಹಾಗೂ ರವಿ ಪಾಟೀಲ್ ಹಾಗೂ ಸ್ಥಳೀಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ