Kannada NewsKarnataka NewsLatest

*ಚೆನ್ನಮ್ಮನ ಕಿತ್ತೂರ: ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ಕಿಚ್ಚ ಸುದೀಪ್ ಭರ್ಜರಿ ರೋಡ ಶೋ*

ಪ್ರಗತಿವಾಹಿನಿ ಸುದ್ದಿ; ನೇಸರಗಿ: ರಾಜ್ಯ ವಿಧಾನಸಭೆ ಚುನಾವಣಾ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ಬೈಲಹೊಂಗಲ ತಾಲೂಕಿನ ನೇಸರಗಿ ಗ್ರಾಮದಲ್ಲಿ ಚೆನ್ನಮ್ಮನ ಕಿತ್ತೂರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ ಪರ ನಟ ಕಿಚ್ಚ‌ ಸುದೀಪ್ ಭರ್ಜರಿ ರೋಡ ಶೋ ನಡೆಸಿ ಚುನಾವಣಾ ಪ್ರಚಾರ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ಶಾಸಕರಾಗಿ ಅನೇಕ ನೀರಾವರಿ ಯೋಜನೆಗಳನ್ನು ತಂದು ಕ್ಷೇತ್ರದ ಜನತೆಗೆ ಅನುಕೂಲ ಕಲ್ಪಿಸಿರುವ ಮಹಾಂತೇಶ ದೊಡ್ಡಗೌಡರ ಅವರನ್ನು ಎರಡನೆ ಬಾರಿಗೆ ಶಾಸಕರನ್ನಾಗಿ ಆಯ್ಕೆ ಮಾಡಿ. ಇನ್ನು ಹಚ್ಚಿನ ಮಟ್ಟದ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.

ಸರಳ ವ್ಯಕ್ತಿ ಮಹಾಂತೇಶ ದೊಡ್ಡಗೌಡರ ಅವರನ್ನು ಬೆಂಬಲಿಸಿ ಮತ್ತು ಈ ಭಾಗದ ಜನರ ಅಭಿವೃದ್ಧಿ ಆದರೆ ಎಲ್ಲರಿಗಿಂತ ನನಗೆ ಹೆಚ್ಚು ಖುಷಿ. ಅಭಿಮಾನಿಗಳಿಂದಲೆ ನಾವು. ಅವರಿಲ್ಲದೆ ನಾವಿಲ್ಲ, ಸೇರಿದ ಎಲ್ಲ ಅಭಿಮಾನಿಗಳಿಗೆ ನಾನು ಚಿರಋಣಿ ಜನರಿಗೆ ಒಳ್ಳೆಯದಾದರೆ ಅದೇ ನನಗೆ ಖುಷಿ ಎಂದರು.

ಇದೆ ವೇಳೆ ಅಭಿಮಾನಿಗಳು ವೀರ ಮದಕರಿ ಚಿತ್ರದ ಡೈಲಾಗ್ ಹೇಳುವಂತೆ ಕೇಳಿದಾಗ ಅಭಿಮಾನಿಗಳಿಗಾಗಿ ಕಿಚ್ಚ ಸುದೀಪ್ ಡೈಲಾಗ ಹೇಳಿ ರಂಜಿಸಿದರು.

Home add -Advt

ಬೃಹತ್ ರೋಡ ಶೋನಲ್ಲಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ, ಬೆಳಗಾವಿ ಜಿಲ್ಲಾ (ಗ್ರಾ)ಬಿಜೆಪಿ ಅದ್ಯಕ್ಷ ಸಂಜಯ ಪಾಟೀಲ, ಕಿತ್ತೂರ ಮಂಡಳ ಅದ್ಯಕ್ಷ ಬಸವರಾಜ ಪರವಣ್ಣವರ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬಿ ಎಪ್ ಕೊಳದೂರ,ಪ್ರಕಾಶ ಮೂಗಬಸವ, ನಿಂಗನಗೌಡ ದೊಡ್ಡಗೌಡರ, ಎಸ್ ಎಮ್ ಪಾಟೀಲ, ಮಹಾಂತೇಶ ಕೂಲಿನವರ,ಅಶೋಕ‌ ವಕ್ಕುಂದ, ಪ್ರಕಾಶ ಬಡಗನ್ನವರ,ಶ್ರೀಶೈಲ ಕಮತಗಿ,ಸೇರಿದಂತೆ ಬಿಜೆಪ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button