Belagavi NewsBelgaum NewsEducationKannada NewsKarnataka NewsLatest

*ಕೆಎಲ್ಎಸ್  ಜಿಐಟಿಯಲ್ಲಿ ಅಗ್ರ ಶ್ರೇಯಾಂಕಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ಕೆಎಲ್‌ಎಸ್‌  ಜಿಐಟಿಯ ಸಿಲ್ವರ್  ಜುಬಿಲಿ ಸಭಾಂಗಣದಲ್ಲಿ , ಇದೇ  30 ಡಿಸೆಂಬರ್ 2023 ರಂದು ಬೆಳಿಗ್ಗೆ 11 ಗಂಟೆಗೆ, 2022-23ನೇ ಸಾಲಿನ , ಅಗ್ರ ಶ್ರೇಯಾಂಕಿತ ವಿದ್ಯಾರ್ಥಿಗಳಿಗೆ  ಸನ್ಮಾನ ಕಾರ್ಯಕ್ರಮವನ್ನು ನಡೆಸಲಾಯಿತು.

ಈ ಸಂಧರ್ಭದಲ್ಲಿ ಒಟ್ಟು 54 ವಿದ್ಯಾರ್ಥಿಗಳಿಗೆ , ಶೈಕ್ಷಣಿಕ, ಕ್ರೀಡೆ, ಹಾಗೂ ಉತ್ತಮ ಸಾಂಸ್ಕೃತಿಕ ಸಾಧನೆಗಾಗಿ  , ಕೆಎಲ್‌ಎಸ್ ಆಡಳಿತ ಮಂಡಳಿ, ದಾನಿಗಳು ಮತ್ತು ಹಳೆಯ ವಿದ್ಯಾರ್ಥಿಗಳಿಂದ ಘೋಷಿಸಲ್ಪಟ್ಟ , ಪ್ರಶಸ್ತಿ, ಪ್ರಮಾಣಪತ್ರ, ವಿದ್ಯಾರ್ಥಿವೇತನ ಮತ್ತು ಬಹುಮಾನಗಳನ್ನು ನೀಡಲಾಯಿತು.

ಸಮಾರಂಭದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಟಿ. ಎನ್. ಶ್ರೀನಿವಾಸ, ಕರ್ನಾಟಕ ಲಾ ಸೊಸೈಟಿಯ ಉಪಾಧ್ಯಕ್ಷ ಶ್ರೀ ದೀಪಕ ವಿ. ಕುಲಕರ್ಣಿ, ಜಿಐಟಿ ಆಡಳಿತ ಮಂಡಳಿ , ಚೇರ್ ಮನ್ , ಶ್ರೀ ರಾಜೇಂದ್ರ ಬೆಳಗಾಂವಕರ, ಜಿಐಟಿ ಪ್ರಾಚಾರ್ಯರು,  ಡಾ. ಎಂ. ಎಸ್. ಪಾಟೀಲ್ ಮತ್ತು ಡಾ ಪಿ.  ಅರುಣ್‌ಕುಮಾರ್, ಡೀನ್ ಅಕಾಡೆಮಿಕ್ಸ್, ಉಪಸ್ಥಿತರಿದ್ದರು.

ಡಾ. ಟಿ. ಎನ್. ಶ್ರೀನಿವಾಸ ಅವರು ಅಗ್ರ ಶ್ರೇಯಾಂಕಿತ ವಿದ್ಯಾರ್ಥಿಗಳು ಮತ್ತು ಅವರ ಪೋಷಕರ ಪ್ರಯತ್ನವನ್ನು ಅಭಿನಂದಿಸಿದರು. ವಿಟಿಯು ಪ್ರಾರಂಭಿಸಿದ ವಿವಿಧ ಉಪಕ್ರಮಗಳಾದ ಆನರ್ಸ್  ಮತ್ತು ಮೈನರ್ಸ್ ಕೋರ್ಸ್‌ಗಳು , ಪ್ರಮಾಣೀಕೃತ ಕೋರ್ಸ್‌ಗಳು ಇತ್ಯಾದಿಗಳ ಕುರಿತು ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಡೀನ, ವಿಭಾಗ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು .

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button