ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲೋಕಸಭಾ ಉಪಚುನಾವಣಾ ದಿನಾಂಕ ಘೋಷಣೆ ಬೆನ್ನಲ್ಲೇ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ನಾಲ್ವರು ವೈದ್ಯರು ಕೂಡ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ.
ಡಾ.ಗಿರೀಶ್ ಸೋನಾಲ್ಕರ್, ಡಾ.ರವಿ ಪಾಟೀಲ್, ಡಾ.ವಿಶ್ವನಾಥ ಪಾಟೀಲ್ ಹಾಗೂ ಡಾ.ಸೋನಾಲಿ ಸರ್ನೋಬತ್ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ವಿಶ್ವನಾಥ ಪಾಟೀಲ್ ಹಾಗೂ ರವಿ ಪಾಟೀಲ್ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇನ್ನು ಗಿರೀಶ್ ಸೋನಾಲ್ಕರ್ ರೆಡ್ಡಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಡಾ. ಸೋನಾಲಿ ಸರ್ನೋಬತ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿಲ್ಲ. ಆದರೆ ಹೈಕಮಾಂಡ್ ಗೆ ಹೋಗಿರುವ ಪಟ್ಟಿಯಲ್ಲಿ ಅವರ ಹೆಸರೂ ಸೇರಿಕೊಂಡಿದೆ. ಪಕ್ಷ ಸೂಚಿಸಿದರೆ ಸ್ಪರ್ಧಿಸುತ್ತೇನೆ. ನಾನೇನು ಪ್ರಯತ್ನ ನಡೆಸುತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಪಂಚಮಸಾಲಿ ಸ್ವಾಮೀಜಿಗಳ ಮೂಲಕ ಡಾ.ರವಿ ಪಾಟೀಲ್ ಲಾಭಿ ನಡೆಸುತ್ತಿದ್ದರೆ ಇತ್ತ ಸಿಎಂ ಬಿ.ಎಸ್.ಯಡಿಯೂರಪ್ಪ ಮೂಲಕ ಡಾ.ವಿಶ್ವನಾಥ ಪಾಟೀಲ್ ಒತ್ತಡ ಹಾಕುತ್ತಿದ್ದಾರೆ. ಡಾ.ಗಿರೀಶ್ ಸೋನವಾಲ್ಕರ್ ಸಂಘ ಪರಿವಾರದ ನಾಯಕರ ಮೂಲಕ ಲಾಬಿ ನಡೆಸಿದ್ದಾರೆ. ಒಟ್ಟಾರೆ ಬೆಳಗಾವಿ ಲೋಕಸಭಾ ಉಪಚುನಾವಣಾ ಬಿಜೆಪಿ ಟಿಕೆಟ್ ಯಾರಿಗೆ ಸಿಗಲಿದೆ ಎಂಬುದು ಕುತೂಹಲ ಕೆರಳಿಸಿದೆ.
ಬೆಳಗಾವಿ ಉಪಚುನಾವಣೆ; ಟಿಕೆಟ್ ಗಾಗಿ ಬಿಜೆಪಿ ನಾಯಕರ ಪೈಪೋಟಿ
ಬೆಳಗಾವಿ ಉಪಚುನಾವಣೆ: ರಮೇಶ ಜಾರಕಿಹೊಳಿ ಕನಸು ನನಸಾಗಲಿದೆಯೇ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ