ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಏನೂ ಕೇಳಬೇಡಿ, ಈ ವಿಚಾರವಾಗಿ ನಾನು ಸಧ್ಯಕ್ಕೆ ಮಾತನಾಡಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಸಿಡಿ ಕೇಸ್ ಬಗ್ಗೆ ವಿಚಾರಿಸಲು ಕಾನೂನಿದೆ, ನ್ಯಾಯಾಲಯವಿದೆ ನೋಡೋಣ ಏನಾಗುತ್ತೆ ಎಂದು. ಸಧ್ಯಕ್ಕೆ ನನಗೆ ಚುನಾವಣೆ ಮುಖ್ಯ. ಮೊದಲು ಚುನಾವಣೆ ಎದುರಿಸೋಣ ಎಂದರು.
ಒಂದು ರೀತಿಯಲ್ಲಿ ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಬೆಳಗಾವಿಯಲ್ಲಿ ಆಕಸ್ಮಿಕವಾಗಿ ಈ ಚುನಾವಣೆ ಬಂದಿದೆ. ರಾಜ್ಯ ಸರ್ಕಾರದ ವೈಫಲ್ಯ, ಸಾಮಾನ್ಯ ಜನರು, ಯುವಕರು, ರೈತರು, ಮಹಿಳೆಯರು, ಆಟೋ ಚಾಲಕರು, ಬೀದಿಬದಿ ವ್ಯಾಪಾರಿಗಳು ಹೀಗೆ ಪ್ರತಿಯೊಬ್ಬರಿಗೂ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅವರಿಗೆ ಅರಿವಿದೆ. ಹಾಗಾಗಿ ಜನರಿಗೆ ಸರ್ಕಾರದ ವಿರುದ್ಧ ಆಕ್ರೋಶವಿದೆ. ಆ ಆಕ್ರೋಶವನ್ನು ಅವರು ಹೇಗೆ ತೋರ್ಪಡಿಸಬೇಕು. ಚುನಾವಣೆಯಲ್ಲಿ ಕಾಂಗ್ರೆಸ್ ಗೆ ವೋಟು ಹಾಕುವ ಮೂಲಕ ನಮ್ಮ ಅಭ್ಯರ್ಥಿಯನ್ನು ಜನರ ದ್ವನಿಯಾಗಿ ಆಯ್ಕೆ ಮಾಡುವ ಮೂಲಕ ತೋರಿಸಬೇಕು ಎಂದು ಹೇಳಿದರು.
ಸತೀಶ್ ಜಾರಕಿಹೊಳಿ ಮೊದಲು ಕೇಳಿದ್ದು ಟ್ರೇನಿಂಗ್ ಪ್ರೋಗ್ರಾಂ. ನಮ್ಮ ಕಾರ್ಯಕರ್ತರಿಗೆ ಜ್ಞಾನ, ಶಿಸ್ತು ಕೊಡಬೇಕೆಂದು. ಇಂತಹ ವಿಚಾರವುಳ್ಳ ಪ್ರಬಲ ನಾಯಕನನ್ನು ಒಂದೇ ಒಂದಿ ಅಪಸ್ವರವಿಲ್ಲದೆ ಕಣಕ್ಕಿಳಿಸಿದ್ದೇವೆ. ಇದೇ ನಮ್ಮ ಶಕ್ತಿ ಎಂದು ಅವರು ಹೇಳಿದರು.
ಡಿ.ಕೆ.ಶಿವಕುಮಾರ ಬೆಳಗಾವಿಯ ಹಿಂಡಲಗಾ ಗಣಪತಿ ಹಾಗೂ ಕಾರಂಜಿಮಠದ ಗುರುಸಿದ್ದೇಶ್ವರ ಸ್ವಾಮಿಗಳ ದರ್ಶನ ಪಡೆದರು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಕಾಂಗ್ರೆಸ್ ನಾಯಕರು ಜೊತೆಗಿದ್ದರು.
ಜಾರಕಿಹೊಳಿ ಸೌಮ್ಯ, ಸಜ್ಜನ – ಡಿ.ಕೆ.ಶಿವಕುಮಾರ ಪ್ರಶಂಸೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ