Kannada NewsLatest

ಯುವತಿ ನಾಪತ್ತೆ ಮತ್ತು ಇತರ ಸುದ್ದಿಗಳು

ಜವಾಹರ ನವೋದಯ ಪರೀಕ್ಷೆ ಮೆ. 16 ಕ್ಕೆ ಮುಂದೂಡಿಕೆ:

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 2021-22 ನೇ ಸಾಲಿನ ಜವಾಹರ ನವೋದಯ ವಿದ್ಯಾಲಯದ ಆಯ್ಕೆ ಪರೀಕ್ಷೆಯು (6 ನೇ ತರಗತಿ ಪ್ರವೇಶ ಪರೀಕ್ಷೆ 2021) ಎಪ್ರೀಲ್ 10 ಕ್ಕೆ ನಡೆಯಬೇಕಿರುವ ಪ್ರವೇಶ ಪರೀಕ್ಷೆಯನ್ನು ಆಡಳಿತಾತ್ಮಕ ಕಾರಣದಿಂದ ಮುಂದೂಡಲಾಗಿದ್ದು, ಮೇ 16 ರಂದು ಚಿಕ್ಕೋಡಿ ತಾಲೂಕಿನ ಕೋಥಳಿಯ ಕುಪ್ಪಾನವಾಡಿಯ ವಿದ್ಯಾಲಯದ ನಡೆಸಲಾಗುತ್ತದೆ ಎಂದು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಅರವಿಂದ್.ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ: ಕಂಟ್ರೋಲ್ ರೂಮ್ ಆರಂಭ:

ಬೆಳಗಾವಿ ಲೋಕಸಭಾ ಉಪ ಚುನಾವಣೆ ಸಂದರ್ಭದಲ್ಲಿ ನೀತಿಸಂಹಿತೆ ಉಲ್ಲಂಘನೆ ಸೇರಿದಂತೆ ಇತರೆ ಚುನಾವಣಾ ಅಕ್ರಮಗಳು ಕಂಡುಬಂದರೆ ಸಾರ್ವಜನಿಕರು ದೂರು ನೀಡಲು ಅನುಕೂಲವಾಗುವಂತೆ ಕಂಟ್ರೋಲ್ ರೂಮ್ ಗಳನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದ್ದಾರೆ.

ಮಾದರಿ ನೀತಿ ಸಂಹಿತೆಗೆ ಸಂಬಂಧಿಸಿದಂತೆ: ಎಂ.ಸಿ.ಸಿ ಕಂಟ್ರೋಲ್ ರೂಮ್-0831-2406332, ದೂರು ನಿರ್ವಹಣಾ ಕೇಂದ್ರ(ಸಿ.ಎಂ.ಸಿ)- 0831-2406325, ಸಿವಿಜಿಲ್- 0831-2406304

Home add -Advt

ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಚುನಾವಣಾ ಅಕ್ರಮಗಳು ಕಂಡುಬಂದಲ್ಲಿ ತಕ್ಷಣವೇ ಮೇಲ್ಕಂಡ ನಿಯಂತ್ರಣ ಕೊಠಡಿಗಳಿಗೆ ಮಾಹಿತಿಯನ್ನು ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೀತಿಸಂಹಿತೆ ಉಲ್ಲಂಘನೆ: ದೂರು ದಾಖಲಿಸಲು ಕಂಟ್ರೋಲ್ ರೂಮ್ ಆರಂಭ:

ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಸಹಾಯಕ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಆರಂಭಿಸಲಾಗಿರುವ ಮಾದರಿ ನೀತಿ ಸಂಹಿತೆ(ಎಂ.ಸಿ.ಸಿ)ಗೆ ಸಂಬಂಧಿಸಿದಂತೆ ಆರಂಭಿಸಲಾಗಿರುವ ಕಂಟ್ರೋಲ್ ರೂಮ್ ದೂರವಾಣ ಸಂಖ್ಯೆಗಳು. ಈ ಕೆಳಗಿನಂತಿವೆ:

ಸ್ಥಳ ಹಾಗೂ ಮೊಬೈಲ್ ಸಂಖ್ಯೆ ಗಳ ವಿವರ:

ಜಿಲ್ಲಾಧಿಕಾರಿಗಳ ಕಚೇರಿ ಬೆಳಗಾವಿ: 0831-2406325, 0831-2406332, ಅರಭಾವಿ: 08334-251212,

ಗೋಕಾಕ: 08332-225073, ಬೆಳಗಾವಿ ಉತ್ತರ : 0831-2405337, ಬೆಳಗಾವಿ ದಕ್ಷಿಣ: 9481504229, ಬೆಳಗಾವಿ ಗ್ರಾಮೀಣ: 9019369449,  ಬೈಲಹೊಂಗಲ: 08288-233152,  ಸವದತ್ತಿ: 08330-224488,  ರಾಮದುರ್ಗ: 08335-242162

ನೀತಿಸಂಹಿತೆ ಉಲ್ಲಂಘನೆ ಕುರಿತ ದೂರು/ಮಾಹಿತಿಯನ್ನು ಸಾರ್ವಜನಿಕರು ನೀಡಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿ ಎಂ.ಜಿ.ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವತಿ ನಾಪತ್ತೆ:

ಬೆಳಗಾವಿ;  ಧಾರವಾಡ ಜಿಲ್ಲೆಯ ನೀರಲಕಟ್ಟಿ ಗ್ರಾಮದ ನಿವಾಸಿಯಾದ ರುಕ್ಮವ್ವಾ ದುರ್ಗಪ್ಪಾ ಭಜಂತ್ರಿ ಮಗಳಾದ ಸುಮಾ ದುರ್ಗಪ್ಪ ಭಜಂತ್ರಿ ಫೆ.20 ರಂದು ಸಂಜೆ 6 ಗಂಟೆಗೆ ಶಾಂತವ್ವಾ ಭೀಮಪ್ಪ ಭಜಂತ್ರಿ ಇವರ ಮನೆಯಿಂದ ಹೊರಗಡೆ ಹೋಗಿ ಬರುವುದಾಗಿ ತಿಳಿಸಿ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ ಎಂದು ಧಾರವಾಡ ಜಿಲ್ಲೆಯ ಕುಲಗೋಡ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಯಸ್ಸು 18, ಸಾಧಾರಣ ಮೈ ಕಟ್ಟು, ದುಂಡು ಮುಖ, ದಪ್ಪ ಮೂಗು, ಬಲ ಕಣ್ಣು ಮೆಳ್ಳ ಕಣ್ಣು ಇರುತ್ತದೆ. ಕೆಂಪು ಚೂಡಿದಾರ ಧರಿಸಿದ್ದು, ಕನ್ನಡ ಹಾಗೂ ಕೊರಮಾ ಭಾಷೆ ಮಾತನಾಡುತ್ತಾಳೆ.

ಸದರಿಯವರ ಬಗ್ಗೆ ಸುಳಿವು ಸಿಕ್ಕಲ್ಲಿ ಧಾರವಾಡ ಜಿಲ್ಲೆಯ ಕುಲಗೋಡ ಪೊಲೀಸ್ ಠಾಣೆಗೆ ಸಂಪರ್ಕಿಸಬಹುದು ಎಂದು ಕುಲಗೋಡ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಸಭಾ ಉಪ ಚುನಾವಣೆ: ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಒಪ್ಪಿಸಲು ಜಿಲ್ಲಾಧಿಕಾರಿ ಹಿರೇಮಠ ಸೂಚನೆ
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಉಪ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಜಮಾ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ಸೂಚನೆ ನೀಡಿದ್ದಾರೆ.

ಲೈಸೆನ್ಸ್‌ದಾರರು ಒಂದು ವೇಳೆ ಶಸ್ತ್ರಾಸ್ತ್ರ ಒಪ್ಪಿಸದಿದ್ದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಚುನಾವಣೆಯ ಸಮಯದಲ್ಲಿ ಆಯುಧ ಲೈಸೆನ್ಸುದಾರರು ಆಯುಧಗಳೊಂದಿಗೆ ಓಡಾಡುವುದರಿಂದ ಶಾಂತಿಭಂಗ ಆಗಬಹುದು ಅಥವಾ ಲೈಸೆನ್ಸುದಾರರು ಆಯುಧಗಳು ದುರುಪಯೋಗವಾಗುವ ಸಾಧ್ಯತೆಗಳಿರುತ್ತವೆ. ಚುನಾವಣೆಯ ಸಮಯದಲ್ಲಿ ಶಾಂತಿ ಭಂಗವಾಗದಂತೆ ನೋಡಿಕೊಳ್ಳುವುದು ಅವಶ್ಯವಿರುವುದರಿಂದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶವನ್ನು ಹೊರಡಿಸಿದ್ದಾರೆ.

ಸೆಕ್ಯುರಿಟಿ ಏಜೆನ್ಸಿಗಳು, ಯಾವುದೇ ಸಂಸ್ಥೆಗಳಿಗೆ ಸೆಕ್ಯೂರಿಟಿ ಸೇವೆಗಳನ್ನು ನೀಡುವ ಗಾರ್ಡ್ ಗಳು, ಖಾಸಗಿ ಗನ್ ಮ್ಯಾನ್ ಗಳು, ಜಿಲ್ಲಾಮಟ್ಟದ ಸ್ಕ್ರೀನಿಂಗ್ ಕಮಿಟಿಗೆ ಅರ್ಜಿ ಸಲ್ಲಿಸುವ ಮುಖಾಂತರ ಶಸ್ತ್ರಾಸ್ತ್ರ ಜಮಾ ಮಾಡುವುದರಿಂದ ವಿನಾಯಿತಿಯನ್ನು ಪಡೆದುಕೊಳ್ಳಬಹುದು.

ಶಸ್ತ್ರಾಸ್ತ್ರ ಸ್ಕ್ರೀನಿಂಗ್ ಸಮಿತಿ:
ಜಿಲ್ಲಾಧಿಕಾರಿಗಳಾದ ಎಂ.ಜಿ.ಹಿರೇಮಠ ಸ್ಕ್ರೀನಿಂಗ್ ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಡಾ.ಕೆ. ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ (ಸಮಿತಿ ಸದಸ್ಯರು).
ಸಹಾಯಕ ಪೊಲೀಸ್ ಆಯುಕ್ತರು ಎನ್.ವಿ.ಭರಮನಿ ಅವರು ಜಿಲ್ಲಾಮಟ್ಟದ ಸ್ಕ್ರೀನಿಂಗ್ ಕಮಿಟಿಯ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

ಹಿಂಡಲಗಾ ಮಹಾಲಕ್ಷ್ಮಿ ದೇವಿಯ ಜಾತ್ರೆ: ಮದ್ಯ ಮಾರಾಟ ನಿಷೇಧ
ಬೆಳಗಾವಿ: ಹಿಂಡಲಗಾ ಗ್ರಾಮದಲ್ಲಿ ಶ್ರೀ ಮಹಾಲಕ್ಷ್ಮಿ ದೇವಿಯ ಜಾತ್ರೆಯ ಹಿನ್ನೆಲೆಯಲ್ಲಿ ಮಾರ್ಚ್ 18 ಬೆಳಿಗ್ಗೆ 6 ಗಂಟೆಯಿಂದ ಮಾರ್ಚ್ 20ರ ಮದ್ಯ ರಾತ್ರಿ 12 ಗಂಟೆಯವರೆಗೆ ಮದ್ಯ ಮಾರಾಟವನ್ನು ನಿಷೇಧಿಸಿ ಪೊಲೀಸ್ ಆಯುಕ್ತ ಡಾ.ಕೆ.ತ್ಯಾಗರಾಜನ್ ಅವರು ಆದೇಶಿಸಿದ್ದಾರೆ.

ಅಬಕಾರಿ ಉಪ ಆಯುಕ್ತರು ಬೆಳಗಾವಿ ನಗರ ಹಾಗೂ ಅವರ ಅಧೀನದಲ್ಲಿ ಬರುವ ಅಧಿಕಾರಿಗಳು ಹೆಚ್ಚುವರಿ ಅಬಕಾರಿ ಅಧೀಕ್ಷಕರು ಬೆಳಗಾವಿ ಮತ್ತು ಅಬಕಾರಿ ಉಪ ಅಧೀಕ್ಷಕರು ಮದ್ಯ ಮಾರಾಟ ನಿಷೇಧ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕು ಹಾಗೂ ಆದೇಶವನ್ನು ಉಲ್ಲಂಘನೆ ಮಾಡಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೊಲೀಸ್ ಆಯುಕ್ತರು ಸೂಚನೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button