
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಜಿಎಸ್ ಟಿ ನಿಬಂಧನೆಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿ ಫೆ.26ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ.
ಫೆ.26ರಂದು ದೇಶದ ವಾಣಿಜ್ಯ ಮಾರುಕಟ್ಟೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅಖಿಲಭಾರತ ವರ್ತಕರ ಸಂಘಟನೆ-ಸಿಎಐಟಿ ತಿಳಿಸಿದೆ.
ಜಿಎಸ್ ಟಿ ಕಠಿಣ ನಿಬಂಧನೆಗಳನ್ನು ಪರಿಶೀಲಿಸಬೇಕೆಂದು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಮತ್ತು ಜಿಎಸ್ ಟಿ ಕೌನ್ಸಿಲ್ ಗಳಿಗೆ ಒತ್ತಾಯಿಸಿ ದೇಶದ 1500 ಸ್ಥಳಗಳಲ್ಲಿ ಪ್ರತಿಭಟನೆ ಧರಣಿ ನಡೆಸಲಾಗುವುದು ಎಂದು ತಿಳಿಸಿದೆ.