ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಹಾರಾಷ್ಟ್ರ ಸಿಎಂ ಉದ್ಧವ್ ಟಾಕ್ರೆ ಮತ್ತೆ ಕ್ಯಾತೆ ತೆಗೆದುದ್ದು, ಹುತಾತ್ಮರು ಗಡಿ ಹೋರಾಟದಲ್ಲಿ ಪಾಲ್ಗೊಂಡು ಹುತಾತ್ಮರಾದಂತವರು ಹಾಗೂ ಅವರ ಕುಟುಂಬಗಳ ತ್ಯಾಗ, ಬಲಿದಾನ ಸಮರ್ಪಣಾ ಭಾವಕ್ಕೆ ಗೌರವ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಅಲ್ಲದೇ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸುವವರೆಗೆ ಸುಮ್ಮನಿರಲ್ಲ. ಸಿಎಂ ಉದ್ಧವ್ ನೇತೃತ್ವದಲ್ಲಿ ಹೋರಾಟ ಮಾಡುತ್ತೇವೆ. ಬೆಳಗಾವಿ ಕರ್ನಾಟಕ ಆಕ್ರಮಿತ ಪ್ರದೇಶ. ಬೆಳಗಾವಿ ಪ್ರದೇಶ, ಸಾಂಸ್ಕೃತಿಕ ಪ್ರಾಂತ್ಯ ಮಹಾರಾಷ್ಟ್ರದ್ದು ಈ ಪ್ರಾಂತ್ಯ ಮಹಾರಾಷ್ಟ್ರಕ್ಕೆ ಸೇರಿಸದಿದ್ದರೆ ಬಲಿದಾನ ವ್ಯರ್ಥ. ಭಾಷಾವಾರು ಪ್ರಾಂತ್ಯ ರಚನೆ ವೇಳೆ ಮಹಾರಾಷ್ಟ್ರಕ್ಕೆ ಅನ್ಯಾಯವಾಗಿದೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರುವವರೆಗೂ ಸುಮ್ಮನಿರಲ್ಲ. ಹುತಾತ್ಮರಾದವರ ಬಲಿದಾನ ವ್ಯರ್ಥ್ಯವಾಗಲು ಬಿಡಲ್ಲ ಎಂದಿದ್ದಾರೆ.
ವಿವಾದಿತ ಟ್ವೀಟ್ ಮಾಡುವ ಮೂಲಕ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕನ್ನಡಿಗರನ್ನು ಕೆರಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ