ಪ್ರಗತಿವಾಹಿನಿ ಸುದ್ದಿ; ಬೆಳಗಾವಿ; ಬೆಳಗಾವಿ ಹುಕ್ಕೇರಿ ಹಿರೇಮಠದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಮಂಗಳವಾರ ಸುವಿಚಾರ ಚಿಂತನ ಬಳಗ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಏರ್ಪಡಿಸಿತ್ತು.
ಈ ಪೂಜೆಯ ಸಾನಿದ್ಯವನ್ನು ವಹಿಸಿದ್ದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಹಾಶಿವರಾತ್ರಿಯ ದಿನ ನಾವೆಲ್ಲರೂ ಕೂಡ ಉಪವಾಸ ಮಾಡುವ ಪದ್ಧತಿ ಇದೆ. ಉಪವಾಸ ಎಂದರೆ ಉಪ ಸಮೀಪ, ವಾಸ ಎಂದರೆ ಇರು. ಶಿವನ ಸಮೀಪದಲ್ಲಿರುವ ಅಪರೂಪದ ದಿನ ಅದು ಶಿವರಾತ್ರಿ ಎಂದರು.
ನಾವು ಶ್ರದ್ಧೆಯಿಂದ ಒಂದು ಗಂಟೆಯಾದರೂ ಶಿವನ ಪೂಜೆ ಮಾಡಿದರೆ ಮಹಾಶಿವನಿಗೆ ಪ್ರೀಯವಾಗುತ್ತದೆ. ಇಷ್ಟಲಿಂಗ ಪೂಜೆಯನ್ನು ನಾವೆಲ್ಲರೂ ಕೂಡ ಮಾಡಿಕೊಂಡು ಬಂದಿದ್ದೇವೆ ಇಷ್ಟಾರ್ಥಯಕಂ ಇಷ್ಟ ಲಿಗಂ ಬೇಡಿದ್ದನ್ನೆಲ್ಲ ಕೊಡುವ ಎಲ್ಲಾ ಶಕ್ತಿಯನ್ನು ಒಳಗೊಂಡ ಇಷ್ಟ ಲಿಂಗ ಪೂಜಿಸಬೇಕೆಂದರು.
ಸಿದ್ಧಲಿಂಗಸ್ವಾಮಿ ಕುಲಕರ್ಣಿ, ಚಂದ್ರಶೇಖರಯ್ಯ ಸಾಲಿಮಠಸವಡಿ, ಪಟ್ಟಣಶೆಟ್ಟಿ, ಹೂಲಿಕಂತಿಮಠ ಸೇರಿದಂತೆ ಇನ್ನಿತರ ಭಕ್ತರು ಸಾಮೂಹಿಕ ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಹಾಶಿವರಾತ್ರಿ: ಶಿವನಾಮ ಜಪ ಮಾಡಿ ಪೂಜೆ ಸಲ್ಲಿಸಿದ ಸಚಿವೆ ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ