ಮಂಗಾಯಿ ನಗರದಲ್ಲಿ ರಸ್ತೆ ಬಂದ್ ಮಾಡಿ ದೇವಸ್ಥಾನದವರು ಕಂಪೌಂಡ್ ನಿರ್ಮಿಸುತ್ತಿರುವ ಆರೋಪ; ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯ ವಡಗಾಂವಿಯ ಮಂಗಾಯಿ ನಗರದಲ್ಲಿ ಮಂಗಾಯಿ ದೇವಸ್ಥಾನದವರು ರಸ್ತೆಗೆ ಅಡ್ಡಲಾಗಿ ಮೇಲೆ ಕಂಪೌಂಡ್ ನಿರ್ಮಿಸುತ್ತಿದ್ದು ಇದರಿಂದ ಜನರಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸ್ಥಳೀಯರಾದ ರೇಖಾ ಲೋಕರಿ, ಮಂಗಾಯಿ ಗುಡಿಯ ಬಳಿ ಒಂದು ರಸ್ತೆ ಇದ್ದು, ಕಳೆದ 30 ವರ್ಷಗಳಿಂದ ಇದೇ ರಸ್ತೆಯಲ್ಲಿ ಜನ ಸಂಚರಿಸುತ್ತಿದ್ದಾರೆ. ಆದರೆ ಈಗ ಏಕಾಏಕಿ ದೇವಸ್ಥಾನದವರು ರಸ್ತೆ ಬಂದ್ ಮಾಡಿ ಕಂಪೌಂಡ್ ನಿರ್ಮಿಸತೊಡಗಿದ್ದಾರೆ. ಇದರಿಂದ ಮಂಗಾಯಿ ನಗರದ ಜನರಿಗೆ ಓಡಾಡಲು ರಸ್ತೆ ಇಲ್ಲದಂತಾಗಿದೆ. ರಸ್ತೆಗೆ ಅಡ್ಡಲಾಗಿ ಕಂಪೌಂಡ್ ನಿರ್ಮಿಸುತ್ತಿರುವುದರಿಂದ ಜನ ಹಳ್ಳ ಹಾರಿ ಹರಸಾಹಸಪಟ್ಟು ಸಂಚರಿಸಬೇಕಿದೆ. ಇಲ್ಲಿ ಸಂಚರಿಸುವ ವೇಳೆ ಓರ್ವ ಮಹಿಳೆ ಬಿದ್ದು ಕೈ ಮುರಿದುಕೊಂಡಿದ್ದಾರೆ.
ನಿರ್ಮಿಸುತ್ತಿರುವ ಕಂಪೌಂಡ್ ಕಾಮಗಾರಿಯನ್ನು ತಕ್ಷಣ ನಿಲ್ಲಿಸಬೇಕು, ಮಹಾನಗರ ಪಾಲಿಕೆಯವರು ಮಂಗಾಯಿ ನಗರದ ನಿವಾಸಿಗಳಿಗೆ ರಸ್ತೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಂಗಾಯಿ ನಗರದ ಸುರೇಕಾ ಸಾಂಗ್ಳೇಕರ್, ಬಂಡು ಕೇರವಾಡ್ಕರ್, ನೀತಾ ಅರುಣ ದಾಮ್ಣೆಕರ್, ರಾಕೇಶ ತಳವಾರ, ಮೊದಲಾದವರು ಪಾಲ್ಗೊಂಡಿದ್ದರು.
ಯಲ್ಲಮ್ಮನಗುಡ್ಡ ಮಳಿಗೆಗಳ ಹರಾಜಿನಿಂದ 2 ಕೋಟಿ ಆದಾಯ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
https://pragati.taskdun.com/2-crore-income-from-auction-of-yallammanagudda-shops-dc-nitesh-patil/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ