ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೊರೊನಾ ಸೋಂಕು ಕಡಿಮೆಯಾಗಲೆಂದು ಬಿಟ್ಟಿದ್ದ ಮರಡಿಮಠದ ದೇವರ ಕುದುರೆ ಸಾವನ್ನಪ್ಪಿದ ಬೆನ್ನಲ್ಲೇ ಸಾವಿರಾರು ಜನ ಗ್ರಾಮಸ್ಥರು ಸೇರಿ ಕುದುರೆಯನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ಕೊಣ್ಣೂರ ಗ್ರಾಮದಲ್ಲಿ ನಡೆದಿದೆ.
ಕೊರೊನಾ ಕಡಿಮೆಯಾಗಬೇಕು ಎಂದು ಮರಡಿಮಠದ ಕುದುರೆಯೊಂದನ್ನು ಬಿಡಲಾಗಿತ್ತು. ಇಡೀ ಗ್ರಾಮವನ್ನು ಸುತ್ತಾಡಿದ್ದ ಕುದುರೆ ಏಕಾಏಕಿ ಮೃತಪಟ್ಟಿದೆ. ಮೃತ ಕುದುರೆ ಅಂತ್ಯಸಂಸ್ಕಾರವನ್ನು ಗೌರವಯುತವಾಗಿ ಮಾಡಲು ಸಾವಿರಾರು ಜನ ಮೆರವಣಿಗೆ ಮಾಡಿದ್ದಾರೆ. ಇದರ ಮಾಹಿತಿ ಬರುತ್ತಿದ್ದಂತೆ ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಮರಡಿಮಠವನ್ನೇ ಸೀಲ್ ಡೌನ್ ಮಾಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ಸಾವಿರಾರು ಜನರು ಕುದುರೆ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಮರಡಿಮಠ ಸೀಲ್ ಡೌನ್ ಮಾಡಲಾಗಿದ್ದು, ಭಕ್ತರು ಮಠ ಪ್ರವೇಶ ಮಾಡದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಕುದುರೆ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಜನರ ವಿರುದ್ಧ ಕೇಸ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಗ್ರಾಮದಲ್ಲಿ ದೇವರ ಕುದುರೆಯನ್ನು ರಾತ್ರಿ ಹೊತ್ತು ಸುತ್ತಾಡಲು ಬಿಟ್ಟರೆ ಮಾರಕ ರೋಗಗಳು ಸುಳಿಯುವುದಿಲ್ಲ ಎನ್ನುವ ನಂಬಿಕೆಯ ಮೇಲೆ ಕುದುರೆಯನ್ನು ಬಿಡಲಾಗಿತ್ತು. ಆದರೆ ರಾತ್ರಿ ಬಿಟ್ಟ ಕುರಿತು ಬೆಳಗ್ಗೆ ವೇಳೆಗೆ ಮೃತಪಟ್ಟಿದೆ. ಇದರಿಂದಾಗಿ ಗ್ರಾಮದಲ್ಲಿ ಸಂಪೂರ್ಣ ಸೂತಕದ ವಾತಾವರಣ ನಿರ್ಮಾಣವಾಗಿದೆ.
ಬೆಳಗಾವಿ: ಏಕನಾಥ ಪಾಟೀಲ ಸೇರಿ ಮೂವರು ಶಿಕ್ಷಕರು, ಇತರ 10 ಜನರ ಸಾವು
ಕೋವಿಡ್ ಪ್ರಕರಣಗಳ ಹೆಚ್ಚಳ ಹಿನ್ನೆಲೆ: ಜೂನ್ 7 ರವರೆಗೆ ನಿಷೇಧಾಜ್ಞೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ