Kannada NewsKarnataka NewsLatest

ಸ್ವಂತ ಖರ್ಚಿನಲ್ಲಿ ಕೋವಿಡ್ ಸೋಂಕಿತರ ನೆರವಿಗೆ ಮುಂದಾದ ಶಾಸಕರು

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಲಕ್ಷಣರಹಿತ ಕೋವಿಡ್ ಸೋಂಕಿತರಿಗೆ ತಾತ್ಕಾಲಿಕವಾಗಿ ಆಕ್ಸಿಜನ್ ಒದಗಿಸುವಂತಹ 50 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಶಾಸಕರಾದ ಅಭಯ್ ಪಾಟೀಲ ಹಾಗೂ ಅನಿಲ್ ಬೆನಕೆ ಅವರು ಸ್ವಂತ ‌ಖರ್ಚಿನಲ್ಲಿ ಖರೀದಿಸಿ‌ ಕೋವಿಡ್ ಕೇರ್‌ ಕೇಂದ್ರಗಳಿಗೆ ನೀಡಲು ಮುಂದಾಗಿದ್ದಾರೆ.

ನಗರದ ಸುಭಾಷ್ ನಗರದಲ್ಲಿ ದೇವರಾಜ್ ಅರಸು ವಸತಿ ನಿಲಯದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಕೇಂದ್ರಕ್ಕೆ ಮೊದಲ ಹಂತದಲ್ಲಿ ಐದು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಒದಗಿಸಲಾಗಿದೆ.

ಸುಭಾಷ್ ಸುಭಾಷ್ ನಗರದಲ್ಲಿ ದೇವರಾಜ್ ಅರಸು ವಸತಿ ನಿಲಯದಲ್ಲಿ ಆರಂಭಿಸಲಾಗಿರುವ ಕೋವಿಡ್ ಕೇರ್ ಕೇಂದ್ರದ ಆವರಣದಲ್ಲಿ ಐದು ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಬುಧವಾರ (ಮೇ 5) ಹಸ್ತಾಂತರಿಸಲಾಯಿತು.

ನಗರದಲ್ಲಿ ಕೋವಿಡ್ ಸೋಂಕು‌ ವ್ಯಾಪಕವಾಗಿ ಹರಡುತ್ತಿರುವುದಲ್ಲದೇ ಲಕ್ಷಣರಹಿತ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ತಕ್ಷಣವೇ ಬೆಡ್ ಸಿಗದಿರುವುದನ್ನು ಗಮನಿಸಿದ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ್ ಪಾಟೀಲ ಹಾಗೂ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ್ ಬೆನಕೆ ಅವರು ತಾತ್ಕಾಲಿಕ ಆಕ್ಸಿಜನ್ ಯಂತ್ರಗಳನ್ನು ಒದಗಿಸಿದ್ದಾರೆ.

ಲಕ್ಷಣರಹಿತ ಕೋವಿಡ್ ಸೋಂಕಿತರಿಗೆ 85 ರಿಂದ 90 ರಷ್ಟು ಸ್ಯಾಚ್ಯುರೇಷನ್ ಇದ್ದಂತಹ‌ ಸೋಂಕಿತರಿಗೆ ತಾತ್ಕಾಲಿಕವಾಗಿ ಆಕ್ಸಿಜನ್ ಒದಗಿಸುವ ಮೂಲಕ ಅವರ ಆರೋಗ್ಯ ಸ್ಥಿತಿಯನ್ನು ಸ್ಥಿರಗೊಳಿಸಲು ಆಕ್ಸಿಜನ್ ಕಾನ್ಸಂಟ್ರೇಟರ್ ಗಳು ಉಪಯುಕ್ತವಾಗಲಿವೆ. ಒಂದು‌ ಕಾನ್ಸಂಟ್ರೇಟರ್ ಮೂಲಕ ಇಬ್ಬರಿಗೆ ಆಕ್ಸಿಜನ್ ಸೌಲಭ್ಯವನ್ನು ಕಲ್ಪಿಸಬಹುದು.

ಒಟ್ಟು 25 ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಗೆ ಆದೇಶ:

ಶಾಸಕ ಅನಿಲ್ ಬೆನಕೆ ಹಾಗೂ ತಮ್ಮ ಸ್ವಂತ ಖರ್ಚಿನಲ್ಲಿ ಒಟ್ಟು 25 ಆಕ್ಸಿಜನ್ ಕಾನ್ಸಂಟ್ರೇಟರ್ ಖರೀದಿಗೆ ಈಗಾಗಲೇ ಆದೇಶ ನೀಡಲಾಗಿದೆ.‌ ಇದಕ್ಕೆ ಒಟ್ಟಾರೆ 25 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಉಳಿದ 20 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಕೂಡ ಇದೇ ಕೋವಿಡ್ ಕೇರ್ ಕೇಂದ್ರಕ್ಕೆ ನೀಡಲಾಗುವುದು ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ ತಿಳಿಸಿದ್ದಾರೆ.

25 ಕಾನ್ಸಂಟ್ರೇಟರ್ ಗಳ ಮೂಲಕ ಐವತ್ತು ಜನರಿಗೆ ಆಕ್ಸಿಜನ್ ಸೌಲಭ್ಯ ಕಲ್ಪಿಸಬಹುದು ಎಂದು ಅವರು ತಿಳಿಸಿದರು. ನಗರದ ಉಭಯ ಶಾಸಕರು‌ ತಮ್ಮ ಸ್ವಂತ ‌ಖರ್ಚಿನಲ್ಲಿ ಕೋವಿಡ್ ಕೇರ್ ಕೇಂದ್ರಗಳಿಗೆ 25 ಲಕ್ಷ ರೂಪಾಯಿ ಮೌಲ್ಯದ ಕಾನ್ಸಂಟ್ರೇಟರ್ ಗಳನ್ನು ಒದಗಿಸುವ ಮೂಲಕ ಸೋಂಕಿತರ ನೆರವಿಗೆ ಮುಂದಾಗಿದ್ದಾರೆ.

ಕಾನ್ಸಂಟ್ರೇಟರ್ ಗಳ ಹಸ್ತಾಂತರ ಸಂದರ್ಭದಲ್ಲಿ ಶಾಸಕ ಅಭಯ್ ಪಾಟೀಲ, ಅನಿಲ್ ಬೆನಕೆ, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡುಮ್ಮಗೋಳ ಮತ್ತಿತರರು ಉಪಸ್ಥಿತರಿದ್ದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳವತಿಯಿಂದ ರಕ್ತದಾನ ಶಿಬಿರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button