Kannada NewsLatest

ರುಕ್ಮಿಣಿ ನಗರದ ಸಮಗ್ರ ಅಭಿವೃದ್ಧಿಗೆ ಸಂಕಲ್ಪ; ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಶಹರದ ಮಾದರಿಯಲ್ಲಿ ರುಕ್ಮಿಣಿ ನಗರದ ಜನರಿಗೆ ಎಲ್ಲಾ ರೀತಿಯ ನಾಗರಿಕ ಸೌಲಭ್ಯವನ್ನು ಒದಗಿಸಲು 4.14 ಕೋಟಿ ವೆಚ್ಚದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಶಾಸಕ ಅನಿಲ ಬೆನಕೆ ಹೇಳಿದರು.

ನಗರದ ರುಕ್ಮಿಣಿ ನಗರದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಮಂಗಳವಾರ (ಫೆ.9) ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬೆಳಗಾವಿ ನಗರದಲ್ಲಿ 12 ಅಧಿಕೃತ ಕೊಳಚೆ ಪ್ರದೇಶಗಳಿವೆ. ಅದರಲ್ಲಿ ರುಕ್ಮಿಣಿ ನಗರದಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಈ ಜಾರಿಗೆ ತರಲಾಗಿದ್ದು, ಅತೀ ಕಡಿಮೆ ಸಮಯದಲ್ಲಿ ಕಾಮಗಾರಿ ಮುಗಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.

ಇಲ್ಲಿಯ ಜನರು ಸಭೆ ಸಮಾರಂಭ ನಡೆಸಲು ಸಮುದಾಯ ಭವನ ಹಾಗೂ ಕೌಶ್ಯಾಭಿವೃದ್ಧಿ ಕೇಂದ್ರಗಳನ್ನು ಜಿತಿಟಿಸಿ ಸಹಾಯದಿಂದ ಆರಂಭಿಸಲಾಗುತ್ತದೆ. ಸಣ್ಣ ಮಕ್ಕಳಿಗೆ ಅಂಗನವಾಡಿ ಕೇಂದ್ರ ಹಾಗೂ ಆಟದ ಮೈದಾನ, ಹಿರಿಯ ನಾಗರಿಕರ ಕಲ್ಪನಾಧರಿತ ಗಾರ್ಡನ್, ಮಾರುಕಟ್ಟೆ ಸೌಲಭ್ಯ, ಸ್ಯಾನಿಟರಿ ವೆಂಡಿಂಗ್ ಮಶೀನ್, ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ ಕೊಡಲಾಗುವುದು ಎಂದು ಹೇಳಿದರು.

ಯಾವುದೇ ಕಾರಣಕ್ಕೂ ಕಾಮಗಾರಿ ವಿಳಂಬವಾಗದಂತೆ ಜನರು ಹಾಗೂ ಅಧಿಕಾರಿಗಳು ಎಲ್ಲರೂ ಸಹಕಾರ ನೀಡಿ ಯೋಜನೆಯನ್ನು ಯಶಸ್ವಿ ಗೊಳಿಸಬೇಕು ಎಂದು ಶಾಸಕ ಅನಿಲ್ ಬೆನಕೆ ಹೇಳಿದರು.

ಸ್ಮಾರ್ಟ ಸಿಟಿ ಎಂ ಡಿ ಶಶಿಧರ ಕುರೇರ್, ಮಹಾನಗರ ಪಾಲಿಕೆ ಆಯುಕ್ತರಾದ ಜಗದೀಶ್ ಕೆ‌.ಎಚ್. ಸೇರಿದಂತೆ ಇತರೆ ಅಧಿಕಾರಿಗಳು ಹಾಗೂ ಸ್ಥಳೀಯ ಜನರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button