Kannada NewsLatest

4.60 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಅನಿಲ ಬೆನಕೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿಯಲ್ಲಿ ನಿನ್ನೆಯಷ್ಠೆ ಅಧಿವೇಶನ ಮುಗಿದಿದೆ. ಶಾಸಕರು, ಸಚಿವರು ಇಂದು ಫುಲ್ ಡೇ ರೆಸ್ಟ್ ಮಾಡ್ತಾರೆ ಅಂತ ಎಲ್ಲರು ಅಂದುಕೊಳ್ಳುತ್ತಾರೆ. ಆದರೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ಅಧಿವೇಶನ ಮುಗಿಯುತ್ತಿದ್ದಂತೆ ಉಳಿದಕೊಂಡಿದ್ದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.

ಬೆಳಗಾವಿಯ ರಾಮತೀರ್ಥ ನಗರದಲ್ಲಿ ಶಾಸಕ ಅನಿಲ ಬೆನಕೆ ಅವರು 4.60 ಕೋಟಿ ಕಾಮಗಾರಿಗೆ ಚಾಲನೆ ನೀಡಿದರು. ಕಾಮಗಾರಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಮತೀರ್ಥ ನಗರದಲ್ಲಿ ಕಣಬರ್ಗಿಯಿಂದ ಹರ್ಷ ಹೋಟೆಲ್ ವರೆಗಿನ ರಸ್ತೆಕಾಮಗಾರಿಗೆ ಚಾಲನೆ ನೀಡಲಾಗಿದೆ. ಈ ಕಾಮಗಾರಿಗೆಯು 4.60 ಲಕ್ಷದ್ದಾಗಿದೆ. ಹರ್ಷ ಹೋಟೆಲ್ ನಿಂದ ಉದಯ ಸ್ಕೂಲ್ ವರೆಗಿನ ರಸ್ತೆಗೆ 60 ಲಕ್ಷ, ಮೀಸಲಿಡಲಾಗಿದೆ. ಇನ್ನು ಎರಡು ಮೂರು ದಿನಗಳಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಮಾಹಿತಿ ನೀಡಿದ ಶಾಸಕ ಅನಿಲ ಬೆನಕೆ ಅವರು, ಬೆಳಗಾವಿ ಉತ್ತರ ಕ್ಷೇತ್ರದ ಚರಂಡಿ ಕಾಮಗಾರಿಗೂ ಕೂಡ ಟೆಂಡರ್ ಆಗಿದೆ. ಚರಂಡಿಕಾಮಗಾರಿಯು 30 ಕೋಟಿ ವೆಚ್ಚದಲ್ಲಿ ನಡೆಯಲಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಾಮತೀರ್ಥ ನಗರದಲ್ಲಿ ಚರಂಡಿ ಸಮಸ್ಯೆ ಇರುವುದಿಲ್ಲ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.

ಈ ವೇಳೆ ಬುಡಾ ಅಧ್ಯಕ್ಷರಾದ ಸಂಜಯ ಬೆಳಗಾಂವಕರ, ನಗರಸೇವಕ ಹನಮಂತ ಕೊಂಗಾಲಿ, ಬಿಜೆಪಿ ಉತ್ತರ ಮಂಡಳ ಪ್ರಧಾನ ಕಾರ್ಯದರ್ಶಿ ಈರಯ್ಯಖೋತ, ಬಿಜೆಪಿ ಉತ್ತರ ಮಂಡಳ ಉಪಾಧ್ಯಕ್ಷರಾದ ವಿಲಾಸ ಕೆರೂರು, ಆಟೋ ನಗರ ಇಂಡಸ್ಟ್ರೀಸ್ ಅಸೋಸಿಯೇಶನ್ ಅಧ್ಯಕ್ಷರಾದ ಸುರೇಶಯಾದವ, ಎನ್.ಬಿ.ನಿರ್ವಾಣಿ, ಅಡ್ವ ಕಿವಡಸನ್ನವರ, ಮಹಾಶಕ್ತಿ ಕೇಂದ್ರದ ಪ್ರಮುಖರಾದ ಸಂತೋಷದೇಸಾಯಿ, ಮಹಾನಗರ ಸಾಮಾಜಿಕ ಮಾಧ್ಯಮ ಪ್ರಭಾರಿ ಕೇದಾರಜೋರಾಪುರ ಹಾಗೂ ನಿವಾಸಿಗಳು ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳಿಂದ ಪ್ರೊ. ವಿಜಯಲಕ್ಷ್ಮಿ ಪುಟ್ಟಿ ವಿರಚಿತ ಕೃತಿ ಲೋಕಾರ್ಪಣೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button