Kannada NewsLatest
ಗ್ರಾಮೀಣ ಜನರಿಗೂ ನಗರದ ಸೌಲಭ್ಯ: ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಕೊನೇವಾಡಿ ಗ್ರಾಮದಲ್ಲಿ ಕಾಂಕ್ರಿಟ್ ರಸ್ತೆಗಳ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಸೋಮವಾರ ಭೂಮಿ ಪೂಜೆಯ ಮೂಲಕ ಚಾಲನೆಯನ್ನು ನೀಡಿದರು.
ಗ್ರಾಮೀಣ ಜನರಿಗೂ ನಗರದ ಜನರಂತೆ ರಸ್ತೆ, ನೀರು, ವಿದ್ಯುತ್ ಮೊದಲಾದ ಮೂಲಭೂತ ಸೌಲಭ್ಯಗಳನ್ನು ಹೊಂದುವ ಹಕ್ಕಿದೆ. ಅದನ್ನು ಒದಗಿಸಿಕೊಡಬೇಕಾದದ್ದು ನಮ್ಮಂತಹ ಜನಪ್ರತಿನಿಧಿಗಳ ಕರ್ಯವ್ಯವಾಗಿದೆ. ನಾನು ನನ್ನ ಕರ್ತವ್ಯದಿಂದ ವಿಮುಖನಾಗದೆ ನಿಮಗೆ ನ್ಯಾಯಯುತವಾಗಿ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನೂ ಒದಗಿಸಿಕೊಡುತ್ತಿದ್ದೇನೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಈ ಸಂದರ್ಭದಲ್ಲಿ ಹೇಳಿದರು. ಗ್ರಾಮದ ಹಿರಿಯರು, ಜಾವೇದ್ ಜಮಾದಾರ, ಎ ಪಿ ಎಮ್ ಸಿ ಅಧ್ಯಕ್ಷ ಯುವರಾಜ ಕದಂ, ಬಾಗಣ್ಣ ನರೋಟಿ, ತುರಮರಿ, ರಘುನಾಥ್ ಖಂಡೇಕರ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



