
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಹಲಗಾ ಗ್ರಾಮದಲ್ಲಿ ಶ್ರೀ ವಿಠ್ಠಲ ರುಕ್ಮಿಣಿ ಗ್ರುಪ್ ವತಿಯಿಂದ ಏರ್ಪಡಿಸಲಾಗಿದ್ದ ಸತ್ಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿದರು.

ಈ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ, ಭಜನಾ ಮಂಡಳಿಯವರಿಗೆ, ನೂತನವಾಗಿ ಆಯ್ಕೆಗೊಂಡ ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರನ್ನು ಸನ್ಮಾನಿಸಲಾಯಿತು. ನಂತರ ಗ್ರಾಮಸ್ಥರು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಗಣಪತ್ ಮಾರಿಹಾಳ್ಕರ್, ಸಾಗರ ಕಾಮನಾಚೆ, ಚೇತನ ಕುರಂಗಿ, ನಜೀರ್ ಮುಲ್ಲಾ, ವಿಲಾಸ ಪರಿಟ್, ಸದಾನಂದ ಬಿಲ್ಗೊಜಿ, ಪಿರಾಜಿ ಜಾಧವ್, ರೂಪಾ ಸುತಾರ, ತವನಪ್ಪ ಪಾಯಕ್ಕ, ಕಲ್ಪನಾ ಹಣಮಂತಾಚೆ, ಲಕ್ಷ್ಮೀ, ಸರೋಜಿನಿ ವಡಗಾವಿ, ರೇಖಾ ಚಿಕ್ಕಪರಪ್ಪ, ಲಕ್ಷ್ಮೀ ಗಜಪತಿ, ಸುಜಾತಾ ದೇಸಾಯಿ, ಭಾರತಿ ಪಾಯಕ್ಕ, ರೇಖಾ ಪರಿಟ್, ವಾಯ್ ಎಮ್ ಸಮಾಜಿ, ಚಾರುಕೀರ್ತಿ ಸೈಬನ್ನವರ, ಅಣ್ಣಾಸಾಹೇಬ್ ಘೋರ್ಪಡೆ, ಮಹಾವೀರ ಪಾಟೀಲ, ಅರವಿಂದ ಪಾಟೀಲ, ಎಸ್ ಎಮ್ ಬೆಳವತ್ಕರ ಜೋಸೆಫ್ ಫರ್ನಾಂಡೀಸ್, ವಿ ಆರ್ ಗ್ರುಪ್, ಡಾಕ್ಲು ಬಿಲ್ಗೊಜಿ, ಲಕ್ಷ್ಮಣ ಬಿಲ್ಗೊಜಿ, ಭುಜಂಗ ಬಿಲ್ಗೊಜಿ, ಪ್ರವೀಣ ಹಾಗೂ ಮುಂತಾದವರು ಉಪಸ್ಥಿತರಿದ್ದರು.