Latest

ಕಾರ್ಣಿಕಕ್ಕೂ ಮುನ್ನ ಕಳಚಿ ಬಿದ್ದು ಭಗ್ನಗೊಂಡ ಮೈಲಾರಲಿಂಗೇಶ್ವರ ತ್ರಿಶೂಲ

ಪ್ರಗತಿವಾಹಿನಿ ಸುದ್ದಿ; ವಿಜಯನಗರ: ಮೈಲಾಲಿಂಗೇಶ್ವರ ಜಾತ್ರೆಯ ದಿನವೇ ದೇವಸ್ಥಾನದ ಮಹಾದ್ವಾರದ ಮುಂಭಾಗ ಇರುವ ಶಿಬಾರ ತ್ರಿಶೂಲ ಕಳಚಿ ಬಿದ್ದಿದ್ದು, ಇದು ಅಪಶಕುನವಿರಬಹುದೇ ಎಂಬ ಆತಂಕ ಭಕ್ತರಲ್ಲಿ ಮೂಡಿದೆ.

ಇಂದು ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರದಲ್ಲಿ ಜಾತ್ರೆ ನಡೆಯಬೇಕಿದ್ದು, ಈ ವೇಳೆ ಕಾರ್ಣಿಕ ನುಡಿಯುವ ಕಾರ್ಯಕ್ರಮವಿರುತ್ತದೆ. ಆದರೆ ಕಾರ್ಣಿಕಕ್ಕೂ ಮುನ್ನವೇ ತ್ರಿಶೂಲ ಕಳಚಿ ಬಿದ್ದಿದ್ದು ಅಪಶಕುನ ಎಂಬುದು ಭಕ್ತರ ಆತಂಕ.

Home add -Advt

ಸ್ಥಳಕ್ಕೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಎ.ಸಿ.ಪ್ರಕಾಶ್ ಭೇಟಿ ನೀಡಿದ್ದು, ಸ್ಥಳೀಯರಿಂದ ಮಾಹಿತಿ ಪಡೆದಿದ್ದಾರೆ. ಸಂಪ್ರದಾಯದಂತೆ ಮತ್ತೊಮ್ಮೆ ತ್ರಿಶೂಲ ಪ್ರತಿಷ್ಠಾಪನೆ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

Related Articles

Back to top button