ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮೋದಗಾದ ಹನುಮಾನ ಮಂದಿರ ಮತ್ತು ಮಾವಿನಕಟ್ಟೆಯ ರೇಣುಕಾಚಾರ್ಯ ದೇವಸ್ಥಾನಗಳಿಗೆ ಅನುದಾನದ ಚೆಕ್ ಗಳನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಶನಿವಾರ ಆಯಾ ದೇವಸ್ಥಾನಗಳ ಆಡಳಿತಮಂಡಳಿಗೆ ಹಸ್ತಾಂತರಿಸಿದರು.
ಮೊದಗಾ ಗ್ರಾಮದ ಹನುಮಾನ ಮಂದಿರದ ಸಮುದಾಯ ಭವನ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ 5 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿದ್ದಾರೆ. ಇಂದು ಕೊನೆಯ ಹಂತದ ಚೆಕ್‌ನ್ನು ದೇವಸ್ಥಾನ ಕಮೀಟಿಯವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ಕಾಂಚನಾ ನಾಯಿಕ, ನಮ್ರತಾ ಕಾಳೆ, ಬಸವರಾಜ ಕಲ್ಲೂರ, ಶಿವಾನಂದ ರಾಜಗೋಳಿ, ಮಂಜುನಾಥ ತುಕ್ಕಾರ, ಶಿವಾಜಿ ಅಷ್ಟೇಕರ, ಓಮಣ್ಣಾ ಅಷ್ಟೇಕರ, ಬಸವಣ್ಣಿ ಮುಗಳಿ, ಪಾಂಡು ಬಡಗಾವಿ, ಸುಭಾಷ ಹೆಗಡೆ, ಮಂಗಳ ಅನಂತ ತಾರೀಹಾಳ, ಭಗೀರತಾ ಧಾನೋಜಿ, ಗಂಗವ್ವಾ ಮುಚ್ಚಂಡಿ, ಸಾಗರ ಹಣಬರ, ಮಾರುತಿ ಮುಗಳಿ, ಶಾಲಾ ಅಧ್ಯಾಪಕರು, ಎಸ್ ಡಿ ಎಮ್‌ಸಿ ಸದಸ್ಯರು, ಗ್ರಾಮದ ಯುವಕರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾವಿನಕಟ್ಟಿ ಗ್ರಾಮದ ಶ್ರೀ ರೇಣುಕಾಚಾರ್ಯ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕಾಗಿ ಶಾಸಕರ ಅನುದಾನದಲ್ಲಿ 3.50 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಲಾಗಿದ್ದು, ಇವತ್ತು ದೇವಸ್ಥಾನದ ಕಮೀಟಿಯವರಿಗೆ ಕೊನೆಯ ಹಂತದ ಚೆಕ್ ನ್ನು ಹಸ್ತಾಂತರಿಸಿದರು.
ಈ ಸಮಯದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಟ್ರಸ್ಟ್ ಕಮೀಟಿಯವರು, ಶಂಕರಗೌಡ ಪಾಟೀಲ, ಸ್ಥಳೀಯ ಜನಪ್ರತಿನಿಧಿಗಳು, ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ